ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ನಾಯಕನಹಟ್ಟಿ ತ್ರಿವಳಿ ಕೊಲೆಗೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಪತ್ತೆ ಮಾಡಿರುವ ಪೋಲಿಸರು, ಇನ್ನುಳಿದ 02 ಜನ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಪಟ್ಟಣ ಆಂಜನೇಯ ಬಡಾವಣೆಯ ವಾಸಿಗಳಾದ ಸೀನಪ್ಪ (53), ಸೀನಪ್ಪನ ಮಗನಾದ ಯಲ್ಲೇಶ (22) ಮತ್ತು ಸೀನಪ್ಪನ ತಮ್ಮನ ಮಗನಾದ ಮಾರೇಶ (23) ಇವರು ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪಟ್ಟಣ ಪಂಚಾಯ್ತಿಗೆ ಸೇರಿದ ಜಾಗದಲ್ಲಿ ಹಂದಿಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದರು.
ದುಷ್ಕರ್ಮಿಗಳು ಹಂದಿಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಉದ್ದೇಶದಿಂದ ಯಾವುದೋ ವಾಹನಗಳಲ್ಲಿ ಬಂದು ಸೀನಪ್ಪ, ಯಲ್ಲೇಶಿ ಮತ್ತು ಮಾರೇಶಿ ರವರನ್ನು ಯಾವುದೋ ವಸ್ತುಗಳಿಂದ ಬಲವಾಗಿ ಹೊಡೆದು ಕೊಲೆ ಮಾಡಿ ಸಾಯಿಸಿದ ಬಳಿಕ ಗುಡಿಸಲಿನಲ್ಲಿದ್ದ ಸುಮಾರು 50 ಹಂದಿಗಳನ್ನು ಮತ್ತು ಮರಿಗಳನ್ನು ವಾಹನಗಳಲ್ಲಿ ಹಾಕಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದರು. ಕೊಲೆಯ ಗುರುತು ಸಿಗಬಾರದೆಂಬ ಉದ್ದೇಶದಿಂದ ಖಾರದ ಪುಡಿಯನ್ನು ಮಂಚದ ಮೇಲೆ ಹಾಕಿದ್ದರು ಎಂದು ಮಾಹಿತಿ ನೀಡಿದರು.
ಪಕ್ಷ ಮಾಸ: ಪಿತೃ ಶ್ರಾದ್ಧಾ ಮಾಡಲು ಶಕ್ತಿಯಿಲ್ಲದವರು ಏನು ಮಾಡಬಹುದು? ಅಮಾವಾಸ್ಯೆಯಂದು ಪಿಂಡದಾನದ ವೈಜ್ಞಾನಿಕ ಹಿನ್ನೆಲೆಯೇನು?
ಜ್ಯೋತಿಷ್ಯ ಹಾಗೂ ಆಧ್ಯಾತ್ಮ ಕುರಿತಾಗಿನ ಎಲ್ಲ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಇದು ಅತ್ಯಂತ ಘೋರ ಪ್ರಕರಣವಾಗಿದ್ದು, ಸಾರ್ವಜನಿಕರಲ್ಲಿ ನೆಮ್ಮದಿ ಹಾಳುಗೆಡವಿ ಆತಂಕ ಮೂಡಿಸಿ ಭಯಭೀತರಾಗಿಸಿತ್ತು. ಈ ಒಂದು ಕರೋನ ಸಾರ್ವಜನಿಕ ಪಿಡುಗಿನ ಜೊತೆಗೆ ಇಲಾಖೆಗೆ ಕೊಲೆ ಆರೋಪಿಗಳ ಪತ್ತೆ ಕಾರ್ಯವು ಪೊಲೀಸ್ ಇಲಾಖೆಗೆ ಒಂದು ಸವಾಲಿನ ಕಾರ್ಯವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೊಲೆ ಮಾಡಿ ಹಂದಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಗಳ ಮತ್ತು ಕಳುವಾದ ಹಂದಿಗಳ ಪತ್ತೆಯ ಬಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಒಟ್ಟು 10 ತಂಡಗಳನ್ನು ರಚಿಸಿ ವಿಶೇಷ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.
ಸದರಿ ಆರೋಪಿಗಳು ಮತ್ತು ಮಾಲು ಪತ್ತೆಯ ಬಗ್ಗೆ ಆಂದ್ರಪ್ರದೇಶದ ಅನಂತಪುರದ ಕಡೆ, ಬಳ್ಳಾರಿ ದಾವಣಗೆರೆ, ರಾಣೆಬೆನ್ನೂರು, ಚಿಕ್ಕಮಂಗಳೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ತನಿಖೆಯನ್ನು ಕೈಗೊಂಡಿದ್ದು, ಕೃತ್ಯ ನಡೆದ ಸ್ಥಳದಲ್ಲಿ ಟವರ್ ಡಂಪ್ ಪಡೆದು ಅದರ ಆಧಾರದ ಮೇರೆಗೆ ರಾಣೆಬೆನ್ನೂರಿನಲ್ಲಿ ಸಿದ್ದಪ್ಪ ತಂದೆ ಲೇಟ್ ರಾಮಪ್ಪ 35, ಮಾರುತಿ ಹೆಬ್ಬೆಟ್ಟು ತಂದೆ ಸುಂಕಪ್ಪ 20, ಮಂಜಪ್ಪ ಸಣ್ಣಮಂಜ ತಂದೆ ಲೇಟ್ ರಾಮಪ್ಪ, 28 ಸುರೇಶ ಶಾರೂಕ್ ಖಾನ್ ತಂದೆ ಲೇಟ್ ರಾಮಪ್ಪ, 22 ಚೌಡಪ್ಪ ಜಿಲೇಬಿ ತಂದೆ ಲೇಟ್ ರಾಮಪ್ಪ, 35 ಕೃಷ್ಣಾ ಉದ್ದಂಡಿ ತಂದೆ ದುರುಗಪ್ಪ, 26 ಇವರುಗಳನ್ನು ಪತ್ತೆಮಾಡಿ ವಿಚಾರಣೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post