ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶದಲ್ಲಿ ಕರ್ನಾಟಕ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಐಟಿ, ರಕ್ಷಣಾ ಸಂಶೋಧನೆ ಮಾತ್ರವಲ್ಲ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಡಬಲ್ ಇಂಜಿನ್ ತಾಕತ್ತಿನೊಂದಿಗೆ ಮುನ್ನುಗ್ಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಕರ್ನಾಟಕದ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿಯವರು, ಇಂದು ಇಲ್ಲಿಗೆ ಆಗಮಿಸಿರುವುದು ನನ್ನ ಪಾಲಿನ ಪುಣ್ಯ. ಇಡಿಯ ವಿಶ್ವಕ್ಕೇ ಮಾದರಿಯಾದ ಮಹಾನ್ ಸಂತರಾದ ಕನಕದಾಸ ಹಾಗೂ ವಾಲ್ಮೀಕಿಯವರು ಜಯಂತಿಯ ಈ ಪುಣ್ಯದಿನದಂದು ನಾನು ಇಲ್ಲಿಗೆ ಆಗಮಿಸಿರುವುದು ನನಗೆ ಸಂತೋಷ ತಂದಿದೆ ಎಂದರು.
ಬೆಂಗಳೂರು ಹಾಗೂ ಚೆನ್ನೆÊ ನಡುವೆ ವಂದೇ ಭಾರತ್ ಹಾಗೂ ಮೈಸೂರು ನಗರಗಳನ್ನು ಸಂಪರ್ಕಿಸಲಿದೆ. ರಾಜ್ಯ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಇಂದು ಚಾಲನೆ ನೀಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಎರಡನ್ನು ಲೋಕಾರ್ಪಣೆಗೊಳಿಸಲಾಗಿದೆ. ನಾನು ಇಲ್ಲಿಗೆ ಆಗಮಿಸುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಟರ್ಮಿನಲ್ 2ರ ಫೋಟೋಗಳನ್ನು ನೋಡಿದ್ದೆ. ನಿಜಕ್ಕೂ ಎಷ್ಟು ಅದ್ಬುತವಾಗಿ ಇದು ರೂಪುಗೊಂಡಿದೆ. ಫೋಟೋದಲ್ಲಿ ನೋಡಿದ್ದಕ್ಕಿಂತಲೂ ಸುಂದರವಾಗಿದೆ ಎಂದರು.
ನಾಡಪ್ರಭು ಕೆಂಪೇಗೌಡರ ದೂರದೃಷ್ಠಿಯಿಂದಾಗಿ ಬೆಂಗಳೂರು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ ಎನ್ನುವುದು ಎಲ್ಲರ ಹೆಮ್ಮೆ. ಪ್ರಪಂಚದಲ್ಲಿ ಭಾರತದ ಹೆಗ್ಗುರುತು ಸ್ಟಾರ್ಟ್ ಅಪ್’ಗಳಿಂದ ಗುರುತಿಸಿಕೊಂಡಿದೆ. ಸ್ಟಾರ್ಟ್ ಅಪ್ ಕೇವಲ ಒಂದು ಕಂಪೆಯಿಲ್ಲ. ಆತ್ಮವಿಶ್ವಾಸ, ಉತ್ಸಾಹ ತುಂಬುವ ಶಕ್ತಿ. ವಂದೇ ಭಾರತ್ ಕೇವಲ ಒಂದು ಹೊಸ ರೈಲಲ್ಲ. ಅದು ಹೊಸ ಭಾರತದ ಹೊಸ ಹೆಗ್ಗುರುತು. 21ನೆಯ ಶತಮಾನದಲ್ಲಿ ರೈಲು ವ್ಯವಸ್ಥೆ ಹೇಗಿದೆ ಎಂಬುದನ್ನು ಜ್ವಲಂತ ಉದಾಹರಣೆ ಎಂದು ಬಣ್ಣಿಸಿದ್ದಾರೆ.
ಭಾರತ ಈಗ ನಿಂತು ನಿಂತು ಹೋಗುವ ಕಾಲದಲ್ಲಿಲ್ಲ. ಅದನ್ನು ಈಗ ನಾವು ದಾಟಿದ್ದೇವೆ. 21ನೆಯ ಶತಮಾನದಲ್ಲಿ ವೇಗವಾಗಿ ಸಾಗುತ್ತಾ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ ಎಂದರು.
ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ಹೋದರೆ ಹೊಸ ಅನುಭವವನ್ನು ನೀಡುತ್ತದೆ. ದೇಶದ ಎಲ್ಲ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸುವುದು ನಮ್ಮ ಗುರಿಯಾಗಿದೆ ಎಂದರು.
ದೇಶದಲ್ಲಿ ವಿಮಾನ ಸಂಪರ್ಕ ಹಾಗೂ ವಿಮಾನ ನಿಲ್ದಾಣಗಳು ಹೆಚ್ಚಾಗಬೇಕಿದ್ದು, ಇದಕ್ಕೆ ಪೂರಕವಾಗಿ ಟರ್ಮಿನಲ್ 2 ಉದ್ಘಾಟನೆಯಾಗಿದೆ. ಇದರ ಒಳಕ್ಕೆ ಹೋದರೆ ಯಾವುದೋ ಲೋಕಕ್ಕೆ ಹೋದಂತೆ ಅನುಭವವಾಗುತ್ತದೆ ಎಂದರು.
2014ಕ್ಕಿAತಲೂ ಮುನ್ನ ಇಲ್ಲಿನ ಪರಿಸ್ಥಿತಿ ಬೇರೆಯದ್ದೇ ಆಗಿತ್ತು. ಆದರೆ, ಆನಂತರ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಾ ಮುನ್ನುಗ್ಗುತ್ತಿದೆ. ಹಿಂದೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿ, ಇದರ ಕಲ್ಪನೆಯೂ ಸಹ ಸಾಧ್ಯವಿರಲಿಲ್ಲ. ಆದರೆ ಇಂದು ದೇಶದ ಮೂಲೆ ಮೂಲೆಗಳಿಗೂ ಇದು ತಲುಪುತ್ತಿದೆ ಎಂದರು.
ದೇಶದಲ್ಲೇ ಕರ್ನಾಟಕ ಹೂಡಿಕೆಯ ಆಕರ್ಷಣೆಯ ಕೇಂದ್ರವಾಗಿದ್ದುದ, ಇಡಿಯ ವಿಶ್ವ ಕೋವಿಡ್ ಕಪಿಮುಷ್ಠಿಯಲ್ಲಿದ್ದ ವೇಳೆ ಇಲ್ಲಿಗೆ ಮಾತ್ರ 4 ಲಕ್ಷ ಕೋಟಿ ರೂ. ಬಂಡವಾಳ ಹರಿದುಬಂದಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ಹೂಡಿಕೆಗೆ ಹೆಚ್ಚು ಹೆಚ್ಚು ಅವಕಾಶವಿದ್ದು, ಇದರ ಹೆಚ್ಚಿನ ಲಾಭವನ್ನು ಕರ್ನಾಟಕ ಪಡೆಯಲಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ 1.1 ಲಕ್ಷ ಕೋಟಿ ರೂ. ಹೂಡಿಕೆ ನಮ್ಮ ಗುರಿ ಎಂದರು.
ಮೊದಲು ಇಲಾಖೆಗಳ ನಡುವೆ ಸಮನ್ವಯ ಇರಲಿಲ್ಲ. ಆದರೆ, ಇಂದು ಅವೆಲ್ಲವನ್ನೂ ಒಂದೇ ಕಡೆಯಲ್ಲಿ ತಂದು ಪ್ರತಿ ನಾಗರಿಕರಿಗೂ ಅನುಕೂಲ ಮಾಡಿಕೊಡುತ್ತಿದ್ದೇವೆ. ಕರ್ನಾಟಕದಲ್ಲಿ 8 ಲಕ್ಷ ಮನೆಗಳನ್ನು ಬಡವರಿಗಾಗಿ ನಿರ್ಮಿಸಲಾಗಿದೆ. 8 ವರ್ಷದಲ್ಲಿ ದೇಶದಾದ್ಯಂತ 3.5 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post