ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಿನ್ನೆಯಿಂದ ಅಬ್ಬರಿಸುತ್ತಿದ್ದ ಭದ್ರಾ ನದಿ ನೀರಿನ ಅಬ್ಬ ಇಂದು ಇಳಿಕೆಯಾಗಿದ್ದು, ಸೇತುವೆಗೂ ಕೆಳಭಾಗದ ಸೀಲಿಂಗ್ ಮಟ್ಟಕ್ಕೆ ಹರಿಯುತ್ತಿದೆ.
ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣವೂ ಸಹ ಇಂದು ಮುಂಜಾನೆ ವೇಳೆಗೆ ಕಡಿಮೆಯಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲೂ ಸಹ ನೀರು ಇಳಿಕೆಯಾಗಿದೆ.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
ನೀರು ಪೂರೈಕೆ ಘಟಕ ಹಾನಿ?
ನೀರಿನ ಅಬ್ಬರದಿಂದಾಗಿ ಹೊಸ ಸೇತುವೆ ಬಳಿಯಿರುವ ನೀರು ಪೂರೈಕೆ ಘಟಕ ಹಾನಿಯಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಕುರಿತಂತೆ ಅಧಿಕೃತವಾಗಿ ತಿಳಿದುಬಂದಿಲ್ಲದೇ ಇದ್ದರೂ, ನೀರು ಪೂರ್ಣ ಇಳಿಕೆಯಾದ ನಂತರವಷ್ಟೇ ಪರಿಶೀಲನೆ ನಡೆಸಿ ತಿಳಿಯಬೇಕಿದೆ ಎಂದು ವರದಿಯಾಗಿದೆ.
ತೆರವು ಕಾರ್ಯ ಆರಂಭ
ನೀರಿನ ಅಬ್ಬರಕ್ಕೆ ಬೃಹತ್ ಗಾತ್ರದ ಮರದ ದಿಮ್ಮಿಗಳು, ಗಿಡಗಂಟೆಗಳು ಕೊಚ್ಚಿ ಬಂದು ಸೇತುವೆಗೆ ಸಿಲುಕಿಕೊಂಡಿವೆ.
ಸೇತುವೆ ಮಟ್ಟಕ್ಕಿಂತಲೂ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಅವಶೇಷ ತೆರವು ಕಾರ್ಯವನ್ನು ನಗರಸಭೆ ಆರಂಭಿಸಿದೆ.
ಸೇತುವೆಗೆ ಸಿಲುಕಿಕೊಂಡಿರುವ ಬೃಹತ್ ಮರಗಳು, ಗಿಡಗಂಟೆಗಳು ಸೇರಿದಂತೆ ದೊಡ್ಡ ಪ್ರಮಾಣದ ಕಸ ತೆರವು ಕಾರ್ಯವನ್ನು ಇಂದು ಮಧ್ಯಾಹ್ನದಿಂದ ಆರಂಭಿಸಲಾಗಿದೆ.
ಭಾರೀ ಗಾತ್ರದ ಮರದ ದಿಮ್ಮಿಗಳು ಸೇತುವೆ ಮೇಲ್ಬಾಗದಲ್ಲಿ ಸಿಲುಕಿಕೊಂಡಿದ್ದು, ಇದನ್ನು ತೆರವುಗೊಳಿಸಲು ಪೌರ ಕಾರ್ಮಿಕರು ಹರಸಾಹಸ ಪಟ್ಟರು.
Get In Touch With Us info@kalpa.news Whatsapp: 9481252093







Discussion about this post