ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡರ ನಿಧನಕ್ಕೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಂತಾಪ ಸೂಚಿಸಲಾಯಿತು.
ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘ
ಸಂಘದ ವತಿಯಿಂದ ವಿದ್ಯಾ ಮಂದಿರ ಬಳಿಯಿರುವ ಅಧ್ಯಕ್ಷ ಸಿ. ಗೋಪಾಲ್ ಅವರ ನಿವಾಸದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಗೋಪಾಲ್ ಅವರು, ಭದ್ರಾವತಿಯನ್ನು ಸಮಗ್ರವಾಗಿ ಅಭಿವೃದ್ಧಿಯ ಕನಸು ಕಂಡಿದ್ದ ಹುಟ್ಟು ಹೋರಾಟಗಾರ ಅಪ್ಪಾಜಿ ಗೌಡರನ್ನು ಕಳೆದುಕೊಂಡು ನಗರ ಈಗ ಬಡವಾಗಿದೆ. ತಮ್ಮ ಅವಧಿಯಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಎಂದಿಗೂ ಅವರೇ ನಮ್ಮ ಜೊತೆಯಲ್ಲಿ ಇರುವಂತೆ ನಮಗೆಲ್ಲಾ ಭಾವನೆಯಿದೆ ಎಂದರು.
ಪಕ್ಷ ಮಾಸ: ಪಿತೃ ಶ್ರಾದ್ಧಾ ಮಾಡಲು ಶಕ್ತಿಯಿಲ್ಲದವರು ಏನು ಮಾಡಬಹುದು? ಅಮಾವಾಸ್ಯೆಯಂದು ಪಿಂಡದಾನದ ವೈಜ್ಞಾನಿಕ ಹಿನ್ನೆಲೆಯೇನು?
ಜ್ಯೋತಿಷ್ಯ ಹಾಗೂ ಆಧ್ಯಾತ್ಮ ಕುರಿತಾಗಿನ ಎಲ್ಲ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಪ್ರಮುಖರಾದ ಪಾಂಡು, ಮುನಿಸ್ವಾಮಿ, ಸೂರಜ್, ರಾಜು, ಸೆಲ್ವಂ ಸೇರಿದಂತೆ ಇತರರು ಇದ್ದರು.
ಎಐಟಿಯುಸಿ
ಶಾಸಕರ ನಿವಾಸದಲ್ಲಿ ಪ್ರಮುಖರಾದ ಸುಶೀಲಾ ಬಾಯಿ ಅವರ ನೇತೃತ್ವದಲ್ಲಿ ಸಂತಾಪ ಸಭೆ ನಡೆಸಲಾಯಿತು.
ಎಐಟಿಯುಸಿಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವತಿಯಿಂದ ಈ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವೇದಾವತಿ, ಉಮಾ, ವಿಶಾಲಾಕ್ಷಿ, ಜಯಶ್ರೀ, ವಿನೋದಾ, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಪಂ ಸದಸ್ಯ ಮಣಿಶೇಖರ್, ನೋಟರಿ ಲೋಕೇಶ್ವರ ರಾವ್, ಶಾರದಾ ಅಪ್ಪಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post