ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾ ನದಿಯ ಪ್ರವಾಹದಿಂದಾಗಿ ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯಲ್ಲಿ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಡಾ.ಎನ್.ಜೆ. ನಾಗರಾಜ್ ಹೇಳಿದರು.
https://www.facebook.com/KalpaNews/posts/1229137734098213
ಒಕ್ಕಲಿಗರ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕವಲಗುಂದಿ ಗ್ರಾಮದ ಸುಮಾರು 29 ಕುಟುಂಬಗಳ 95ಕ್ಕೂ ಹೆಚ್ಚು ಮಂದಿಯನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಊಟ, ಉಪಹಾರ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲ ರೀತಿಯ ತುರ್ತು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಬಿಸಿ ಊಟದ ಮಾದರಿಯಲ್ಲೂ ಮೂರು ಹೊತ್ತ ಬಿಸಿ, ಶುಚಿಯಾದ ಆಹಾರ ನೀಡಲಾಗುತ್ತಿದೆ. ಇಲ್ಲಿಗೆ ಆಶಾ ಕಾರ್ಯಕರ್ತೆಯರನ್ನೂ ಸಹ ನಿಯೋಜನೆ ಮಾಡಲಾಗಿದೆ ಎಂದರು.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
ಬೇರೆ ಪ್ರದೇಶಗಳೂ ಸಹ ಪ್ರವಾಹಕ್ಕೆ ತುತ್ತಾದರೆ ಅದಕ್ಕಾಗಿ ಇನ್ನೂ ಎರಡು ಕಡೆಗಳಲ್ಲಿ ಕಾಳಜಿ ಕೇಂದ್ರಕ್ಕೆ ಗುರುತಿಸಲಾಗಿದೆ. ನೀರು ಹೆಚ್ಚಾದರೆ ಹೊಳೆಹೊನ್ನೂರು ವ್ಯಾಪ್ತಿಯಲ್ಲೂ ಸಹ ಕೆಲವು ಕಡೆ ಪ್ರವಾಹ ಭೀತಿ ಇದೆ. ಹೀಗಾಗಿ, ಅಲ್ಲಿನ ಬಿಸಿಎಂ ಹಾಸ್ಟೆಲ್’ನ್ನು ಕಾಳಜಿ ಕೇಂದ್ರ ಮಾಡಲು ನಿರ್ಧರಿಸಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದುವರೆಯಲಾಗುವುದು ಎಂದರು.
Get In Touch With Us info@kalpa.news Whatsapp: 9481252093
Discussion about this post