ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾ ನದಿಯಿಂದ ಉಕ್ಕಿ ಹರಿದ ಪರಿಣಾಮ ಪ್ರವಾಹಕ್ಕೆ ತುತ್ತಾಗಿರುವ ಕವಲಗುಂದಿ ಗ್ರಾಮದ ಸುಮಾರು 30 ಕ್ಕೂ ಅಧಿಕ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ನಿನ್ನೆ ರಾತ್ರಿಯೇ ಸ್ಥಳಾಂತರ ಮಾಡಲಾಗಿದೆ.
ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಸುಮಾರು 95ಕ್ಕೂ ಅಧಿಕ ಮಂದಿಗೆ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.
ಉಪವಿಭಾಗಾಧಿಕಾರಿ ಪ್ರಕಾಶ್, ತಹಶೀಲ್ದಾರ್ ಡಾ.ಎನ್.ಜೆ. ನಾಗರಾಜ್ ಹಾಗೂ ನಗರಸಭೆ ಆಯುಕ್ತ ಮನೋಹರ್ ಅವರುಗಳು ವಿಶೇಷ ಮುತುವರ್ಜಿ ವಹಿಸಿ ಇಲ್ಲಿರುವ ಸಂತ್ರಸ್ಥರಿಗೆ ಊಟ, ಉಪಹಾರ, ಶುದ್ಧ ಕುಡಿಯುವ ನೀರು ಹಾಗೂ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿದ್ದಾರೆ.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
ಇಂದು ಮಧ್ಯಾಹ್ನ ತಹಶೀಲ್ದಾರ್ ನಾಗರಾಜ್ ಹಾಗೂ ನಗರಸಭೆ ಆಯುಕ್ತ ಮನೋಹರ್ ಅವರುಗಳು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ವತಃ ಎದುರಿಗೆ ನಿಂತು ಸಂತ್ರಸ್ತರಿಗಾಗಿ ತಯಾರಿಸಿರುವ ಊಟ ಹಾಗೂ ಸ್ವಚ್ಛತೆಯನ್ನು ತಹಶೀಲ್ದಾರ್ ನಾಗರಾಜ್ ಪರಿಶೀಲಿಸಿದರು. ಪ್ರತಿ ಸಂತ್ರಸ್ತರ ಬಳಿ ತೆರಳಿ ಊಟದ ಗುಣಮಟ್ಟ ವಿಚಾರಿಸಿದರು.
ಇನ್ನು, ತಹಶೀಲ್ದಾರ್ ನಾಗರಾಜ್ ಹಾಗೂ ನಗರಸಭೆ ಆಯುಕ್ತ ಮನೋಹರ್ ಅವರುಗಳು ಸಂತ್ರಸ್ತರೊಂದಿಗೆ ಕುಳಿತು ಊಟ ಮಾಡಿದ್ದು ವಿಶೇಷವಾಗಿತ್ತು. ಗುಣಮಟ್ಟದಲ್ಲಿ ಎಲ್ಲೂ ಲೋಪವಾಗದಂತೆ ಎಚ್ಚರಿಕೆ ವಹಿಸಿದ್ದ ಅಧಿಕಾರಿಗಳು, ಅಲ್ಲಿಯೇ ಊಟ ಮಾಡಿದ್ದು ಸಂತ್ರಸ್ತರಿಗೆ ಧೈರ್ಯ ತುಂಬಿದಂತಾಗಿತ್ತು.
ಏನು ಊಟ?
ಇಂದು ಮುಂಜಾನೆ ಉಪಹಾರಕ್ಕೆ ಪಲಾವ್, ಮಧ್ಯಾಹ್ನ ಅನ್ನ, ಸಾಂಬಾರ್ ಹಾಗೂ ಹಪ್ಪಳ ನೀಡಲಾಗಿದೆ.
ಕಾಳಜಿ ಕೇಂದ್ರ ಎಂದು ತಾತ್ಸಾರ ಮಾಡದೇ, ಪ್ರತಿಯೊಬ್ಬರಿಗೂ ಖಾಸಗೀ ಕಾರ್ಯಕ್ರಮದಲ್ಲಿ ಊಟ ವಿತರಿಸುವಂತೆ ಟೇಬಲ್ ಮೇಲೆಯೇ ವಿತರಣೆ ಮಾಡಿದ್ದು ವಿಶೇಷವಾಗಿತ್ತು. ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯಲ್ಲೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ, ಹಗಲಿರುಳು ಶ್ರಮಿಸುತ್ತಿರುವ ತಹಶೀಲ್ದಾರ್ ನಾಗರಾಜ್, ನಗರಸಭೆ ಆಯುಕ್ತ ಮನೋಹರ್, ಉಪವಿಭಾಗಾಧಿಕಾರಿ ಪ್ರಕಾಶ್ ಸೇರಿದಂತೆ ತಾಲೂಕು ಹಾಗೂ ನಗರಸಭೆ ಆಡಳಿತವನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Get In Touch With Us info@kalpa.news Whatsapp: 9481252093
Discussion about this post