ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಸಕ್ತ ಸಾಲಿನ ಬಜೆಟ್ #Bedget ಮಂಡನೆಗೂ ಮುನ್ನವೇ ರಾಜ್ಯ ಸರ್ಕಾರ ಬಿಯರ್ #Beer ಬೆಲೆ ಹೆಚ್ಚಳ ಮಾಡಲಾಗಿದ್ದು, ನಿನ್ನೆಯಿಂದಲೇ ಜಾರಿಗೆ ಬಂದಿದ್ದು, ಮದ್ಯ ಪ್ರಿಯರಿಗೆ ಬಿಸಿ ಮುಟ್ಟಿದೆ.
ಪ್ರತಿ ಬಿಯರ್ ಬಾಟಲಿಯ ದರವು ಕನಿಷ್ಠ 10 ರಿಂದ 50 ರೂ.ವರೆಗೆ ಹೆಚ್ಚಳವಾಗಿದ್ದು, ಹೊಸ ದರ ಹೆಚ್ಚಳವು ಸೋಮವಾರದಿಂದಲೇ ಜಾರಿಯಾಗಿದೆ. ಸರ್ಕಾರದ ಈ ನಿರ್ಧಾರ ಮಧ್ಯಪ್ರಿಯರ ಕಣ್ಣು ಕೆಂಪಾಗಿಸಿದೆ.
Also Read>> ಹಸುವಿನ ಕೆಚ್ಚಲಲ್ಲಿ ಸರಿಯಾಗಿ ಹಾಲು ಕರೆಯುವ ಕ್ರಮ ಹೇಗೆ? ಇಲ್ಲಿದೆ ಮಾಹಿತಿ
ಆಲ್ಕೋಹಾಲ್ #Alcohol ಪ್ರಮಾಣ ಹೆಚ್ಚಿರುವ ಬಿಯರ್’ಗಳ ಬೆಲೆಯು ಗಣನೀಯವಾಗಿ ಏರಿಕೆಯಾಗಿದೆ. ಜನಸಾಮಾನ್ಯರ ಪಾಲಿಗೆ ಕೈಗೆಟಕುವ 300 ರೂ. ಒಳಗಿನ ಕೆಲ ಬಿಯರ್ ಬ್ರಾಂಡ್’ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗಿದೆ.
ಸಾಮಾನ್ಯವಾಗಿ ಬಜೆಟ್’ನಲ್ಲಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಪರಿಷ್ಕರಿಸಲಾಗುತ್ತದೆ. ಆನಂತರವಷ್ಟೇ ಬೆಲೆ ಏರಿಕೆಯಾಗುತ್ತದೆ. ಆದರೆ, ಈ ಬಾರಿ ಬಜೆಟ್ ಮಂಡನೆಗೂ ಮುನ್ನವೇ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿ ದರ ಏರಿಕೆ ಮಾಡಲಾಗಿದೆ.
ಇನ್ನು, ಸಕ್ಕರೆ #Sugar ಬಳಕೆ ಅಥವಾ ಬಳಸದೆ ಮಾಲ್ಟ್ ಅಥವಾ ಧಾನ್ಯದಿಂದ ಹುದುಗಿಸಿದ ಮದ್ಯವನ್ನು ತಯಾರಿಸಬೇಕು. ಸಕ್ಕರೆ ಪ್ರಮಾಣ ಶೇ.25ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಬ್ರೂವರೀಸ್’ಗಳಿಗೆ ಸರ್ಕಾರ ಸೂಚನೆ ನೀಡಿದೆ.
ಇನ್ನು ಮುಂದೆ ಎಲ್ಲಾ ಬ್ರೂವರೀಸ್’ಗಳು ಬಿಯರ್ ತಯಾರಿಕೆಗೆ ಬಳಸುವ ಅಂಶಗಳನ್ನು ಕಡ್ಡಾಯವಾಗಿ ಘೋಷಿಸಬೇಕಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















