ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಪ್ರಸ್ತುತ ಕೊರೋನಾ ಮಹಾಮಾರಿಯಿಂದಾಗಿ ಜನರು ಕೈ-ಬಾಯಿ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಊರಿನಲ್ಲಿ ಎಲ್ಲಿಯಾದರೂ ಕೊರೋನ ಪಾಸಿಟಿವ್ ಎಂದು ತಿಳಿದು ಬಂದರೆ ಆ ಮನೆಯವರಿಗೆ ನೆರವಾಗುವುದು ಬಿಡಿ. ನೆರಮನೆಯವರು ನೇರವಾಗಿ ಮಾತನಾಡುವುದನ್ನು ತಪ್ಪಿಸಿಕೊಂಡು ಓಡಾಡುತ್ತಾರೆ. ಹಾಗಿರುವಾಗ ಕೊರೋನದಿಂದ ಮೃತಪಟ್ಟಿರುವ ಶವವನ್ನು ಜನಪ್ರತಿನಿಧಿಯೊಬ್ಬರು ತಾವೇ ಸ್ವತಃ ಪಿಪಿಇ ಕಿಟ್ ಹಾಕಿಕೊಂಡು ದಹನ ಮಾಡುವ ಮೂಲಕ ಮಾನವೀಯತೆ ಮೆರೆಯುವುದ ಮಾತ್ರವಲ್ಲ, ನಾಗರಿಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಹೆಚ್ಚು ಕಾಫಿ ಕುಡಿದರೆ ಗ್ಯಾಸ್ಟ್ರಿಕ್ ಗ್ಯಾರೆಂಟಿ | ಜೀವನಶೈಲಿ ಹೀಗಿರಲಿ | Gastric | Tips For Healthy Life
ಆರೋಗ್ಯ ಸಲಹೆ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಚೇರ್ಕಾಡಿ ಗ್ರಾಮದ ನಿವಾಸಿ ಕೊರೋನಾ ಸಮಸ್ಯೆಯಿಂದಾಗಿ ಮೃತಪಟ್ಟಿದ್ದರು. ಕೊರೋನಾ ವಾರಿಯರ್ಸ್ ಶವವನ್ನು ತಂದು ಸ್ಮಶಾನಕ್ಕೆ ಮುಟ್ಟಿಸಿದರು.
ಮೃತರ ಮನೆಯಲ್ಲಿ ಗಂಡಸರು ಇಲ್ಲದನ್ನು ಮನಗಂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್ ಶೆಟ್ಟಿಯವರು ಸ್ವತಃ ಪಿಪಿಇ ಕಿಟ್ ತರಿಸಿ, ಹಾಕಿಕೊಂಡು ಸಂಪೂರ್ಣ ದಹನ ಕಾರ್ಯ ನಡೆಸಿಕೊಟ್ಟರು. ಇದನ್ನು ನೋಡಿದ ಸ್ಥಳೀಯ, ಮತ್ತು ಬ್ರಹ್ಮಾವರ ಹಾಗೂ ಬಾರ್ಕೂರು ವಿಶ್ವಕರ್ಮ ಸಮಾಜ ಮಾನ್ಯ ಪಂಚಾಯತ್ ಅಧ್ಯಕ್ಷರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post