ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ನಿಧನಕ್ಕೆ ದೇಶದಾದ್ಯಂತ ಗಣ್ಯಾತಿಗಣ್ಯರು ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಸುದ್ದಿ ತಿಳಿದು ಆಘಾತವಾಗಿದೆ. ಕರುಣಾನಿಧಿ ಅವರ ಕೊಡುಗೆ ತಮಿಳುನಾಡಿಗೆ ಹಾಗೂ ನಮ್ಮ ದೇಶಕ್ಕೆ ಆಪಾರವಾಗಿದೆ. ಇವರ ನಿಧನದಿಂದ ರಾಷ್ಟ್ರ ಇಂದು ಬಡವಾಗಿದೆ ಎಂದಿದ್ದಾರೆ.
Extremely sad to learn of the passing of Thiru M. Karunanidhi. A doyen of our public life, as a contributor to the development of Tamil Nadu and of India he has few peers. Our country is poorer today. My condolences to his family and millions of well-wishers #PresidentKovind
— President of India (@rashtrapatibhvn) August 7, 2018
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದು, ಕರುಣಾನಿಧಿ ಜೀವನ ಸ್ಪೂರ್ತಿಯುತವಾದದ್ದು, ಚಿತ್ರ ಕಥೆಗಾರನಾಗಿ ತಮಿಳು ಚಿತ್ರ ರಂಗ ಪ್ರವೇಶಿಸಿದ್ದ ಕರುಣಾನಿಧಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದರು. 1975ರಲ್ಲಿ ತುರ್ತುಪರಿಸ್ಥಿತಿ ಘೋಷಯಾದಾಗ ಅವರ ಹೋರಾಟವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ನೆನೆದಿದ್ದಾರೆ.
Anguished to learn about the demise of veteran politician, M Karunanidhi ji. He had an impressive life journey, starting as a screen writer in Tamil film industry to being five term Chief Minister of Tamil Nadu. No one can forget his struggle during Emergency, imposed in 1975.
— Amit Shah (@AmitShah) August 7, 2018
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಬದುಕಿರುವಾಗಲೇ ದಂತಕಥೆಯಂತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸಧೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟ್ಯಪೂರ್ಣ ಎಂದಿದ್ದಾರೆ.
ಬದುಕಿರುವಾಗಲೇ ದಂತಕಥೆಯಂತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸಧೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟ್ಯಪೂರ್ಣ. #Karunanidhi #ripkarunanidhi
— CM of Karnataka (@CMofKarnataka) August 7, 2018
ಸೂಪರ್ ಸ್ಟಾರ್ ರಜಿನಿಕಾಂತ್ ಟ್ವೀಟ್ ಮಾಡಿದ್ದು, ನನ್ನ ಜೀವನದಲ್ಲಿ ಇದು ಕರಾಳ ದಿನ. ಕರುಣಾನಿಧಿ ಅವರನ್ನು ಮರೆಯಲು ಸಾಧ್ಯವಿಲ್ಲ . ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ ಹೇಳಿದ್ದಾರೆ.
என்னுடைய கலைஞர் மறைந்த இந்த நாள் என் வாழ்நாளில் நான் மறக்க முடியாத ஒரு கருப்பு நாள்.
அவருடைய ஆன்மா சாந்தி அடையட்டும்
— Rajinikanth (@rajinikanth) August 7, 2018
ಇನ್ನು ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪ್ರಾದೇಶಿಕ ಪಕ್ಷಗಳಿಗೆ ಅಸ್ಥಿತ್ವವನ್ನು ನೀಡಿದ ಮಹಾನ್ ನಾಯಕ. ಅವರ ನಿಧನ ತೀವ್ರ ದುಃಖ ತಂದಿದೆ ಎಂದಿದ್ದಾರೆ.
He had shown the path to regional parties, its a tragic moment for his workers and those who loved him. He was a mature leader and a statesman. Pray to almighty that his soul rests in peace: HD Deve Gowda,Former Prime Minister. #Karunanidhi pic.twitter.com/psi7WYDdc7
— ANI (@ANI) August 7, 2018
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕರುಣಾನಿಧಿ ಅವರ ಆರು ದಶಕಗಳ ರಾಜಕೀಯ ಸೇವೆಯನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
Loved by the Tamilian people, Kalaignar strode the stage of Tamil politics, like a colossus, for over 6 decades. In his passing, India has lost a great son. My condolences to his family as also to the millions of Indians who grieve for their beloved leader tonight.#Karunanidhi
— Rahul Gandhi (@RahulGandhi) August 7, 2018
Discussion about this post