ಕಲ್ಪ ಮೀಡಿಯಾ ಹೌಸ್ | ಕಾರವಾರ |
ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ನೀಡಿದ್ದು, ಕದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾದಲ್ಲಿ ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗುವುದು ಎಂದು ಕೆಪಿಸಿ ಸೂಚನೆ ನೀಡಿದೆ.
ತಾಲ್ಲೂಕಿನ ಕದ್ರಾ ಜಲಾಶಯದ Kadra dam ಒಳಹರಿವು ಹೆಚ್ಚಿದ್ದು, ಜಲಾಶಯದ ಮಟ್ಟ ಇಂದು 31.00 ಮೀ ತಲುಪಿದ್ದು, ಗರಿಷ್ಟ ಮಟ್ಟ 34.50 ಆಗಿರುತ್ತದೆ. ಜಲಾಶಯದ ಸುರಕ್ಷತಾ ದೃಷ್ಠಿಯಿಂದ ಒಳಹರಿವು ಹೆಚ್ಚಾದಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತದೆ.
ಜಲಾನಯ ಪ್ರದೇಶದಲ್ಲಿ ಭಾರಿ ಮಳೆಯಾದಲ್ಲಿ ಒಳ ಹರಿವು ಹೆಚ್ಚುತ್ತದೆ. ಹೀಗಾಗಿ ಜಲಾಶಯದ ಸುರಕ್ಷತೆಯಿಂದ ನೀರನ್ನು ಹೊರಬಿಡಬೇಕಾಗುತ್ತದೆ. ಜಲಾಶಯದ ಕೆಳಭಾಗದ ನಿವಾಸಿಗಳು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಕೆಪಿಸಿ ಕೋರಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















