ಕಲ್ಪ ಮೀಡಿಯಾ ಹೌಸ್ | ಕಾರವಾರ |
ಚಂಡಿಗಢನಲ್ಲಿ ನಡೆದ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್‌ಶಿಪ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿದೆ. ಪಂದ್ಯದಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚು ಪದಕ ಗಳಿಸುವ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಹೆಮ್ಮೆಯ ತಂಡವಾಗಿ ಕರ್ನಾಟಕ ಹೊರಹೊಮ್ಮಿದೆ.
ಸಬ್ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಮೂವರು ಸ್ಕೇಟರ್ಸ್‌ಗಳು: ಮೂವರು ಬೆಂಗಳೂರಿನ ಆಟಗಾರರನ್ನೊಳಗೊಂಡ ಕರ್ನಾಟಕ ತಂಡವೂ ತಮಿಳುನಾಡು, ತೆಲಂಗಾಣ, ಜಮ್ಮು ಕಾಶ್ಮೀರ, ಆಂದ್ರಪ್ರದೇಶ ತಂಡವನ್ನ ಮಣಿಸಿತ್ತು. ನಂತರ ಚಂಡಿಗಢ ಜೊತೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನಪ್ಪಿತು. ಬಳಿಕ ಮೂರನೇ ಸ್ಥಾನಕ್ಕಾಗಿ ಕೇರಳ ತಂಡದ ಜೊತೆಗೆ ನಡೆದ ಹಣಾಹಣಿಯಲ್ಲಿ 3-1ಪಾಯಿಂಟ್‌ಗಳಿಂದ ಗೆಲುವು ಸಾಧಿಸಿದೆ.
ತಂಡದಲ್ಲಿದ್ದವರು: ಮಾನ್ಯತಾ ಶಿರಸಿ(ಕ್ಯಾಪ್ಟನ್), ಆರ್ಯ ಮಂಜುನಾಥ ಬೆಂಗಳೂರು, ಯಶಸ್ವಿನಿ ಬೆಂಗಳೂರು, ಚಿನ್ಮಯಿ ಬೆಂಗಳೂರು, ಮಾನ್ಯ ಬಿ ಎಸ್ ಶಿರಸಿ, ಅಪೂರ್ವ ಕಾರವಾರ, ಕೀರ್ತಿ ಮುಂಡಗೋಡು, ಮಾನಸಿ ಬೆಳಗಾವಿ, ಆರಾಧ್ಯ ಮೆನನ್ ಕಾರವಾರ, ಕೆಡೆಟ್ ಬಾಲಕಿಯರ ವಿಭಾಗದಲ್ಲಿ (11ವರ್ಷದೊಳಗಿನವರು) ಬೆಳ್ಳಿ ಪದಕ ಕೊರಳಿಗೇರಿಸಿಕೊಳ್ಳುವ ಮೂಲಕ ಕರ್ನಾಟಕ ತಂಡದ ಆಟಗಾರರು ಸಂಭೃಮಿಸಿದ್ದಾರೆ. ಕೈಗಾದ ಆದ್ಯಾ ನಾಯ್ಕ ನೇತೃತ್ವದ ತಂಡ ಹರ್ಯಾಣ ಎದುರು 6-0, ಆಂದ್ರಪ್ರದೇಶ ಎದುರು 3-0ವಿಜಯಿಯಾಗಿತ್ತು. ನಂತರ ಕೇರಳ ಜೊತೆಗೆ 2-0, ತಮಿಳುನಾಡು ಜೊತೆ 4-0 ಅಂತರದಿಂದ ಗೆಲುವು ಸಾಧಿಸಿತ್ತು. ಬಳಿಕ ಕೇರಳ ತಂಡದ ಜೊತೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ 3-1 ನಂತರದಲ್ಲಿ ಗೆಲುವಿನ ಕೇಕೆ ಹಾಕಿತ್ತು. ಬಳಿಕ ಪಂಜಾಬ್ ಜೊತೆ ನಡೆದ ಫೈನಲ್ ಪಂದ್ರದಲ್ಲಿ 1-2 ಅಂತರಗಳಿಂದ ಪರಾಭವಗೊಂಡು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.
Also read: ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸೇವೆ ಶ್ಲಾಘನೀಯ: ಮುಖ್ಯಮಂತ್ರಿ ಸಿದ್ದರಾಮಯ್ಯ
ತಂಡದಲ್ಲಿದ್ದವರು: ಆದ್ಯಾ ನಾಯ್ಕ ಕೈಗಾ(ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ಐಶ್ವರ್ಯ ತುಮಕೂರು, ಕವನ ತುಮಕೂರು, ಸನ್ನಿಧಿ ತುಮಕೂರು, ಅಹನಾ ನಾಯ್ಕ ಕಾರವಾರ, ಕುಶಾಲ ಬೆಂಗಳೂರು, ಅನಯಾ ಕಾರವಾರ ತಂಡವನ್ನ ಪ್ರತಿನಿಧಿಸಿದ್ದರು.
ಕೆಡೆಟ್ ಮಿಕ್ಸಡ್ ವಿಭಾಗದಲ್ಲಿ ಆರಂಭದ ಪಂದ್ಯ ತಮಿಳುನಾಡು ಜೊತೆ ಡ್ರಾ, ಆಂದ್ರಪ್ರದೇಶ, ಕೇರಳ , ಎದುರು ಗೆದ್ದು ಸೆಮಿಫೈನಲ್ ತಲುಪಿತ್ತು. ಬಳಿಕ ಮತ್ತೆ ಎದುರಾದ ಕೇರಳ ಜೊತೆಗಿನ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡಿತ್ತು. ನಂತರ ಅಂಕಗಳ ಆಧಾರದ ಮೇಲೆ ಮೂರನೇ ಸ್ಥಾನಕ್ಕಾಗಿ ಆಂದ್ರಪ್ರದೇಶ ತಂಡದೊಂದಿಗೆ ನಡೆದ ಪಂದ್ಯದಲ್ಲಿ 1-3 ಅಂಕ ಗಳಿಸಿ ಕಂಚಿನ ಪದಕಕ್ಕಾಗಿ ತೃಪ್ತಿಪಟ್ಟುಕೊಂಡಿತ್ತು.
ತಂಡದಲ್ಲಿದ್ದವರು: ಆದ್ಯಾ ನಾಯ್ಕ ಕೈಗಾ(ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ರಾಜಗುರು ಶಿರಸಿ, ಸಾಕಿಬ್ ಕೈಗಾ, ಅಯ್ಯನ್ ಕೈಗಾ, ಶ್ರೀಶ ಶೇಷಗಿರಿ ಮೊಗೇರ ಕಾರವಾರ, ಐಶ್ವರ್ಯ ತುಮಕೂರು, ದಕ್ಷತ್ ತುಮಕೂರು ಕರ್ನಾಟಕ ತಂಡವನ್ನ ಪ್ರತಿನಿಧಿಸಿದ್ದರು.
ಒಟ್ಟಾರೆ ಟೂರ್ನಿಯಲ್ಲಿ ಕೈಗಾದ ಆದ್ಯಾ ನಾಯ್ಕ, ರಾಜಗುರು, ಭುವನೀತ, ಮಾನ್ಯತಾ, ಅಪೂರ್ವ ಕರ್ನಾಟಕ ತಂಡದ ಪರವಾಗಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಕರ್ನಾಟಕ ತಂಡದ ಆಟಗಾರರಿಗೆ ದಿಲೀಪ ಹಣಬರ ತರಬೇತಿ ನೀಡಿದ್ದರು. ಮಕ್ಕಳ ಸಾಧನೆಗೆ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಭಿನಂದನೆ ಸಲ್ಲಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post