ಕಲ್ಪ ಮೀಡಿಯಾ ಹೌಸ್ | ಕಾರವಾರ |
ನಗರದ ಶಿವಾಜಿ ಚೌಕ, ಹೂವಿನ ಚೌಕ, ಗೀತಾಂಜಲಿ ಚಿತ್ರ ಮಂದಿರದ ಎದುರು ಹಾಗೂ ಸುಭಾಷ್ ಸರ್ಕಲ್ ಅಟೋ ನಿಲ್ದಾಣಗಳಲ್ಲಿ 74ನೇ ಗಣರಾಜ್ಯೋತ್ಸದ ಅಂಗವಾಗಿ ಶಾಸಕಿ ರೂಪಾಲಿ ನಾಯ್ಕ್ ಧ್ವಜಾರೋಹಣ ನೆರವೇರಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಜಗತ್ತೆ ನಮ್ಮ ದೇಶದ ಶಕ್ತಿ ಏನೆಂದು ಗುರುತಿಸುವಂತೆ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರು, ಅಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಅಟೊ ಚಾಲಕರು ಉಪಸ್ಥಿತರಿದ್ದರು.












Discussion about this post