ದೇಶದ ಪ್ರಮುಖ ಸಂಪತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾಗಿರುವ ಯುಟಿಐ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯು #UTI Asset Management Company (ಯುಟಿಐ ಎಎಂಸಿ) ಕಾರವಾರದಲ್ಲಿ ತನ್ನ ಶಾಖೆ ಆರಂಭಿಸಿದೆ.
ಕಾರವಾರದ ಕೆಇಬಿ ರಸ್ತೆಯ ಎಸ್ಬಿಐ ಶಾಖೆಯ ಎದುರು ಇರುವ ಲ್ಯಾಂಡ್ಮಾರ್ಕ್ ಅಲ್ಟಿಮಾದ ಮೊದಲ ಮಹಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಕುರಿತಂತೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಇಮ್ತಿಯಾಜುರ್ ರೆಹಮಾನ್, ಎಲ್ಲರಿಗೂ ಹಣಕಾಸು ಸೇವೆಯು ಸುಲಭವಾಗಿ ದೊರೆಯುವುದನ್ನು ಉತ್ತೇಜಿಸಲು ಮತ್ತು ಭಾರತದ ಮ್ಯೂಚುವಲ್ ಫಂಡ್ ಸಂಸ್ಥೆಗಳ ಸಂಘವು (ಎಎಂಎಫ್’ಐ) ಬಿ30 ಎಂದು ವರ್ಗೀಕರಿಸಿರುವ, ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ದೇಶದಲ್ಲಿನ 30 ನಗರಗಳ ವ್ಯಾಪ್ತಿಯ ಆಚೆಗೆ ಹೂಡಿಕೆದಾರರನ್ನು ಮ್ಯೂಚುವಲ್ ಫಂಡ್ ಹೂಡಿಕೆಗಳ ಮೂಲಕ ದೇಶದ ಹಣಕಾಸು ವ್ಯವಸ್ಥೆಯ ಮುಖ್ಯವಾಹಿನಿಗೆ ಕರೆತರಲು ಉದ್ದೇಶಿಸಿದೆ. ಯುಟಿಐ ಎಎಂಸಿ-ಯು ದೇಶದ ಉದ್ದಗಲಕ್ಕೂ ತನ್ನ ಶಾಖೆಗಳನ್ನು ವಿಸ್ತರಿಸಲು ಗುರಿ ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ.
ಯುಟಿಐ ಹಣಕಾಸು ಕೇಂದ್ರಗಳು (ಯುಎಫ್ಸಿ), ವಹಿವಾಟು ಅಭಿವೃದ್ಧಿ ಸಹವರ್ತಿಗಳು, ಮ್ಯೂಚುವಲ್ ಫಂಡ್ ವಿತರಕರು (ಎಂಎಫ್ಡಿ) ಮತ್ತು ಬ್ಯಾಂಕ್ ಪಾಲುದಾರರ ನೆರವಿನಿಂದ ತನ್ನ ಹೂಡಿಕೆದಾರರನ್ನು ತಲುಪಲು ಯುಟಿಐ ಮ್ಯೂಚುವಲ್ ಫಂಡ್ ಬದ್ಧವಾಗಿದೆ. ಭಾರತದ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ ಯುಟಿಐ ಮ್ಯೂಚುವಲ್ ಫಂಡ್ ನೋಂದಾವಣೆಗೊಂಡಿದೆ.
ಹೆಚ್ಚುವರಿ ಮಾಹಿತಿಯ ಹೇಳಿಕೆ, ಯೋಜನೆಯ ಮಾಹಿತಿ ದಾಖಲೆ, ಪ್ರಮುಖ ಮಾಹಿತಿ ಒಡಂಬಡಿಕೆ ಮತ್ತು ಅರ್ಜಿ ನಮೂನೆ ಒಳಗೊಂಡಂತೆ ಹೆಚ್ಚಿನ ಮಾಹಿತಿಗೆ ಹತ್ತಿರದ ಯುಟಿಐ ಹಣಕಾಸು ಕೇಂದ್ರ ಅಥವಾ ಭಾರತದ ಮ್ಯೂಚುವಲ್ ಫಂಡ್ಗಳ ಸಂಸ್ಥೆ (ಎಎಂಎಫ್’ಐ) ಮತ್ತು ಷೇರು ಮಾರುಕಟ್ಟೆಯ ರಾಷ್ಟ್ರೀಯ ಸಂಸ್ಥೆಯ (ಎನ್’ಐಎಸ್’ಎಂ) ಪ್ರಮಾಣೀಕೃತ ಮ್ಯೂಚುವಲ್ ಫಂಡ್ ವಿತರಕರನ್ನು (ಎಂಎಫ್ಡಿ) ಸಂಪರ್ಕಿಸಬಹುದು ಎಂದು ತಿಳಿಸಿದೆ.
Discussion about this post