ಕಲ್ಪ ಮೀಡಿಯಾ ಹೌಸ್ | ಕಾಸರಗೋಡು |
ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 10ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಕುಂಬಳದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಬಂಬ್ರಾಣದ ಚೂರಿತ್ತಡ್ಕದ ರಜಾಕ್ ಅವರ ಪುತ್ರಿ ರಿಜ್ವಾನಾ(15) ಎಂದು ಗುರುತಿಸಲಾಗಿದೆ.
ರಿಜ್ವಾನಾ ಮತ್ತು ಆಕೆಯ ಸ್ನೇಹಿತೆ ಸ್ಕೂಟರ್ನಲ್ಲಿ ಟ್ಯೂಷನ್ಗೆ ಹೋಗುತ್ತಿದ್ದರು. ಅಷ್ಟರಲ್ಲಿ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಯಿತು. ರಿಜ್ವಾನಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























