ಕಲ್ಪ ಮೀಡಿಯಾ ಹೌಸ್ | ಕಾಸರಗೋಡು |
ತುಳುನಾಡಿನ ಆರಾಧ್ಯ ದೈವ ಪಂಜುರ್ಲಿಯನ್ನು ಮೂಲ ಕಥಾವಸ್ತುವನ್ನಾಗಿಟ್ಟು ಹಣೆದ ಚಿತ್ರಕಥೆಯಲ್ಲಿ ಮೂಡಿ ಬಂದಿದ್ದ ಕಾಂತಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಕಾಂತಾರ-2 Kantara-2 ಚಿತ್ರದ ನಿರ್ದೇಶನಕ್ಕೆ ತಯಾರಾಗಿದ್ದು, ದೈವಾರಾಧನೆಯ ಜೊತೆಗೆ ತುಳುನಾಡಿನ ಚರಿತ್ರೆಯೂ ಈ ಚಿತ್ರದಲ್ಲಿ ಮೂಡಿ ಬರಲಿದೆ.
ಈಗಾಗಲೇ ಕಾಂತಾರ-2 ಮುಹೂರ್ತ ಕಾರ್ಯಕ್ರಮ ನಡೆದಿದ್ದು, ತುಳುನಾಡಿನ ಸೃಷ್ಠಿಕರ್ತ ಪರಶುರಾಮನ Parashurama ಕಥೆ ಇದರಲ್ಲಿನ ವಿಶೇಷ ಅಂಶವಾಗಿದ್ದು, ಪರಶುರಾಮ ಬಳಸಿದ್ದ ಕೊಡಲಿಯ ಹೊಲಿಕೆಯುಳ್ಳ ಚಂದ್ರಾಯುಧ ಪ್ರಸ್ತುತ ಕೇರಳ ರಾಜಮನೆತನದವರ ಬಳಿ ಇದ್ದು, ಚಿತ್ರದ ಚಿತ್ರೀಕರಣಕ್ಕಾಗಿ ಆ ಆಯುಧವನ್ನು ನೀಡಿ ಸಹಕರಿಸಲು ಮನೆತನ ಹಿರಿಯರು ಉತ್ಸುಕರಾಗಿದ್ದಾರೆ.
ಸುಮಾರು 400-450 ವರ್ಷ ಇತಿಹಾಸವಿರುವ ಈ ಚಂದ್ರಾಯುಧದ ಹಿಡಿಯನ್ನು ಗಂಧದ ಹುಡಿಯನ್ನು ಬಳಸಿ ಮಾಡಲಾಗಿದೆ. 450 ವರ್ಷ ಕಳೆದರೂ ಇಂದಿಗೂ ಅತ್ಯಂತ ಗಟ್ಟಿಮುಟ್ಟಾಗಿ ಇರುವ ಈ ಆಯುಧವನ್ನು ಚಿಪ್ಪಾರು ರಾಜಮನೆತನದ ಮಂದಿ ಇಂದಿಗೂ ಉಳಿಸಿಕೊಂಡಿzರೆ. ರಾಜ ಮನೆತನದ ಹಿರಿಯರು ಈ ಆಯುಧವನ್ನು ಕಾಡುಪ್ರಾಣಿಗಳ ಬೇಟೆಯಾಡಲು ಬಳಸುತ್ತಿದ್ದರು ಎಂದು ಚಿಪ್ಪಾರು ಮನೆತನದ ಹಿರಿಯರಾದ ತಿರುಮಲ ಬಳ್ಳಾಲ್ ಮಾಹಿತಿ ನೀಡಿದ್ದಾರೆ.
Also read: ಚಳ್ಳಕೆರೆ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಪ್ರಾಚೀನ ವಸ್ತುಗಳ ಸಂಗ್ರಹಗಾರರೂ ಆಗಿರುವ ತಿರುಮಲ ಬಳ್ಳಾಲರು ತಮ್ಮ ಹಿರಿಯರು ಬಳಸುತ್ತಿದ್ದ ಹಲವು ಮರದ, ಲೋಹದ ಮತ್ತು ಮಣ್ಣಿನ ಪರಿಕರಗಳನ್ನೂ ತಮ್ಮ ಸಂಗ್ರಹದಲ್ಲಿ ಜೋಡಿಸಿಟ್ಟುಕೊಂಡಿzರೆ. ಅಲ್ಲದೆ ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ ದೈವಕ್ಕೆ ಸೇರಿದಂತಹ ರಾಜಮನೆತನದ ಹಿರಿಯರ ಕಾಲದ ದೈವದ ಆಭರಣಗಳನ್ನು ಇಡುವ ಮಣ್ಣಿನ ಮಡಿಕೆಯಾಕಾರದ ವಸ್ತುಗಳೂ ಇವರ ಸಂಗ್ರಹದಲ್ಲಿದೆ. ರಿಷಬ್ ಶೆಟ್ಟಿ ಬಯಸಿದಲ್ಲಿ ಕಾಂತಾರ-೨ ಚಿತ್ರಕ್ಕಾಗಿ ಚಂದ್ರಾಯುಧವನ್ನು ನೀಡಿ ಸಹಕರಿಸುವುದಾಗಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post