ಶ್ರೀನಗರ: 370ನೆಯ ವಿಧಿಯನ್ನು ರದ್ದುಗೊಳಿಸಿ, ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಕಣಿವೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಉಡುಗೊರೆಯನ್ನು ಅಲ್ಲಿನ ಮಂದಿ ಇಂದು ಸವಿದಿದ್ದು, ಸಂಭ್ರಮ ಮುಗಿಲುಮುಟ್ಟಿದೆ.
ಶ್ರೀನಗರದಲ್ಲಿ ಸ್ವತಂತ್ರೋತ್ಸವ ಆಚರಿಸಿದ್ದು, ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.
ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಕೇವಲ ಐತಿಹಾಸಿಕ ಮಾತ್ರವಲ್ಲ, ಬದಲಾಗಿ ನಮ್ಮ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಬ್ಬಾಗಿಲನ್ನು ತೆರೆದಂತಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅವರ ಗುರುತು ಸಾಲಿನಲ್ಲಿಲ್ಲ ಎಂದು ನಾನು ಭರವಸೆ ನೀಡುತ್ತೇನೆ, ಅದನ್ನು ಹಾಳು ಮಾಡಿಲ್ಲ. ಭಾರತದ ಸಂವಿಧಾನವು ವಿಭಿನ್ನ ಪ್ರಾದೇಶಿಕ ಗುರುತುಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ ಎಂದು ಭರವಸೆ ನೀಡಿದರು.
ಇನ್ನು, ಲಡಾಕ್’ನ ಲೇಹ್’ನಲ್ಲಿ ಸಂಭ್ರಮದಿಂದ ಸ್ವತಂತ್ರೋತ್ಸವವನ್ನು ಆಚರಿಸಲಾಯಿತು.
ಅದೇ ರೀತಿ ಕುಪ್ವಾರಾದಲ್ಲೂ ಸಹ ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಗಿದ್ದು, ಮಕ್ಕಳ ಸಂತಸ ಮುಗಿಲುಮುಟ್ಟಿತ್ತು.
ಅತ್ಯಂತ ಪ್ರಮುಖವಾಗಿ, ಲೇಹ್’ನಲ್ಲಿ ನಡೆದ ಸ್ವತಂತ್ರೋತ್ಸವ ಆಚರಣೆ ಐತಿಹಾಸಿಕ ಎನ್ನುವಂತಿತ್ತು. ಲಡಾಕ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಸಾಂಪ್ರದಾಯಿಕ ಧಿರಿಸು ಧರಿಸಿ, ಸಾಂಪ್ರದಾಯಿಕ ನೃತ್ಯ ಮಾಡಿ ಸಂಭ್ರಮಿಸಿದರು.
ಸಂಸದರ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Discussion about this post