ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನಾ ಯೋಧರು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಈ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿವೆ.
ಈ ಭಾಗದಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ, ಇಂದು ನಸುಕಿನಿಂದಲೇ ಸೇನೆ ಕಾರ್ಯಾರಣೆ ಆರಂಭಿಸಿದ್ದು, ಈ ಭಾಗದಲ್ಲಿ ಒಟ್ಟು 5ರಿಂರ 6 ಉಗ್ರರು ಅವಿತಿದ್ದಾರೆ ಎನ್ನಲಾಗಿದೆ.
ಸೇನೆ ಕಾರ್ಯಾಚರಣೆ ಆರಂಭಿಸಿದಾಕ್ಷಣ ಉಗ್ರರು ಯೋಧರ ವಿರುದ್ಧ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಯೋಧರಿಗೆ ಗುಂಡು ತಗುಲಿದ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಇದರ ಹಿನ್ನೆಲೆಯಲ್ಲಿ ಕೂಂಬಿಂಗ್ ಆಪರೇಶನ್ ಆರಂಭಿಸಿದ ಯೋಧರು, ಇಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಿದ್ದು, ಉಳಿದವರಿಗಾಗಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
Discussion about this post