ತಲಸ್ಸೆರಿ(ಕೇರಳ): 2008ರಲ್ಲಿ ಬಿಜೆಪಿ ಕಾರ್ಯಕರ್ತನನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪ ಹೊತ್ತಿದ್ದ ಸಿಪಿಎಂನ 11 ಕಾರ್ಯಕರ್ತರಿಗೆ ಕೇರಳದ ತಲಸ್ಸೆರಿ ಹೆಚ್ಚುವರಿ ಜಿಲ್ಲಾ ಸೆಷೆನ್‌ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿದೆ.
2008ರ ಮಾರ್ಚ್ 6ರಂದು ನಡೆದಿದ್ದ ಬಿಜೆಪಿ ಕಾರ್ಯಕರ್ತ ಮಹೇಶ್ ಹತ್ಯೆ ಪ್ರಕರಣದಲ್ಲಿ 11 ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿದ್ದ ನ್ಯಾಯಾಲಯ ಈ ಕುರಿತಂತೆ ಇಂದು ತೀರ್ಪು ನೀಡಿದೆ.
ಮೊದಲು ಸಿಪಿಎಂನಲ್ಲಿದ್ದ ಮಹೇಶ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದೇ ಆತನನ್ನು ಹತ್ಯೆ ಮಾಡಲು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಆಟೋ ರಿಕ್ಷಾ ಡ್ರೈವರ್ ಆಗಿದ್ದ ಮಹೇಶ್‌ನನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
















