ಕಲ್ಪ ಮೀಡಿಯಾ ಹೌಸ್ | ಕೇರಳ |
ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನ ನ.15ರಿಂದ ಬಾಗಿಲು ತೆರೆಯಲಿದ್ದು, ದೇವರ ದರ್ಶನಕ್ಕೆ ಆಡಳಿತ ಮಂಡಳಿ ಸಿದ್ಧತೆ ನಡೆಸಿಕೊಂಡಿದೆ.
ಪ್ರತಿ ದಿನ 30 ಸಾವಿರ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳದ ಭಕ್ತರಿಗಾಗಿ ನೀಲಕ್ಕಲ್‌ನಲ್ಲಿ ಐದು ಬುಕ್ಕಿಂಗ್ ಕೌಂಟರ್ ತೆರೆಯಲಾಗಿದೆ.
ಭಕ್ತರಿಗೆ ಎರಡು ಡೋಸ್ ಲಸಿಕೆ ಪಡೆದಿರುವ ದಾಖಲೆ ಅಥವಾ 72 ಗಂಟೆಗಳೊಳಗೆ ಮಾಡಿಸಲಾಗಿರುವ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯ.
ನೀಲಕ್ಕಲ್‌ನಲ್ಲೇ ಕೋವಿಡ್ ಪರೀಕ್ಷಾ ಕೇಂದ್ರಗಳನ್ನೂ ತೆರೆಯಲಾಗಿದ್ದು, ಅಲ್ಲಿ ಪರೀಕ್ಷೆ ಮಾಡಿಸಿದವರಿಗೆ 3 ಗಂಟೆಗಳೊಳಗೆ ವರದಿ ನೀಡುವುದಾಗಿಯೂ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post