ಕಲ್ಪ ಮೀಡಿಯಾ ಹೌಸ್ | ಕೇರಳ |
ಯಾವುದೇ ವ್ಯಕ್ತಿಯೊಬ್ಬರು ಖಾಸಗಿಯಾಗಿ ತನ್ನ ಮೊಬೈಲ್’ನಲ್ಲಿ ಅಶ್ಲೀಲ ವೀಡಿಯೋಗಳನ್ನುನೋಡುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ Kerala Highcourt ಆದೇಶ ನೀಡಿದೆ.
ಬೀದಿ ಬದಿ ವ್ಯಕ್ತಿಯೊಬ್ಬರ ತನ್ನ ಮೊಬೈಲ್ ಫೋನ್’ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದನ್ನು ನ್ಯಾಯಾಲಯ ರದ್ದುಗೊಳಿಸಿ, ಈ ರೀತಿ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆಯೇನು?
ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ತನ್ನ ಮೊಬೈಲ್’ನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ ಮಾಡುತ್ತಿದ್ದ. ಇದಕ್ಕಾಗಿ ಕೇರಳ ಪೊಲೀಸರು ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆತನ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.
Also read: ಚಿಕ್ಕಮಗಳೂರು | ಸರಣಿ ಅಪಘಾತ | ಶಿವಮೊಗ್ಗ ಮೂಲದ ದಂಪತಿ ಸಾವು, ಮಗು ಗಂಭೀರ
ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಧೀಶರು, ಒಬ್ಬರ ಫೋನ್ನಲ್ಲಿ ಅಶ್ಲೀಲ ಫೋಟೋಗಳು ಅಥವಾ ವೀಡಿಯೊಗಳನ್ನು ವಿತರಿಸದೆ ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸದೆ ಖಾಸಗಿಯಾಗಿ ವೀಕ್ಷಿಸುವುದು ಐಪಿಸಿ ಅಡಿಯಲ್ಲಿ ಅಶ್ಲೀಲತೆಯ ಅಪರಾಧವಲ್ಲ ಎಂದಿದ್ದಾರೆ.
ಇಂತಹ ವೀಡಿಯೋಗಳನ್ನು ಖಾಸಗಿಯಾಗಿ ವೀಕ್ಷಿಸುವುದು ವ್ಯಕ್ತಿಯ ಖಾಸಗಿ ಆಯ್ಕೆಯಾಗಿದೆ. ಒಬ್ಬ ವ್ಯಕ್ತಿ ತನ್ನ ಖಾಸಗಿತನದಲ್ಲಿ ಅಶ್ಲೀಲ ಫೋಟೋವನ್ನು ನೋಡುವುದು ಸೆಕ್ಷನ್ 292 ಐಪಿಸಿ ಅಡಿಯಲ್ಲಿ ಅಪರಾಧವಲ್ಲ ಎಂದು ನಾನು ಪರಿಗಣಿಸುತ್ತೇನೆ. ಅದೇ ರೀತಿ, ವ್ಯಕ್ತಿಯೊಬ್ಬ ತನ್ನ ಖಾಸಗಿತನದಲ್ಲಿ ಮೊಬೈಲ್ ಫೋನ್ನಿಂದ ಅಶ್ಲೀಲ ವೀಡಿಯೊವನ್ನು ವೀಕ್ಷಿಸುವುದು ಸಹ ಸೆಕ್ಷನ್ 292 ಐಪಿಸಿ ಅಡಿಯಲ್ಲಿ ಅಪರಾಧವಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post