ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಿರ್ಲೋಸ್ಕರ್ ವಸುಂಧರಾ ಕ್ಲಬ್, ಇದು ಒಂದು ಪರಿಸರ ಪ್ರೇಮಿ ಸದಸ್ಯರುಗಳ ಕ್ಲಬ್, ವಸುಂಧರೆಯನ್ನು ಉಳಿಸುವಂತಹ ನಿಟ್ಟಿನಲ್ಲಿ ಪರಿಸರ ಪ್ರೇಮ ಹೆಚ್ಚಿಸಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಅವರ ಮೂಲಕ ಸಾರ್ವಜನಿಕರಲ್ಲಿ ಪರಿಸರದ ಪ್ರೇಮವನ್ನು ಮತ್ತು ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬಂದಿರುತ್ತದೆ. ಈ ನಿಟ್ಟಿನಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ನದಿಗಳ ಸ್ವಚ್ಛತೆ, ಮರಗಿಡಗಳನ್ನು ಸಂರಕ್ಷಣೆ ಮತ್ತು ನಡೆಸುವುದು, ಶಾಲಾ-ಕಾಲೇಜುಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು, ಪರಿಸರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವವರನ್ನು ಗುರುತಿಸಿ, ಪ್ರತಿವರ್ಷ ವಸುಂಧರಾ ಮಿತ್ರ, ವಸುಂಧರಾ ಸನ್ಮಾನ್ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತದೆ.
ಈ ನಿಟ್ಟಿನಲ್ಲಿ ಸದಸ್ಯರುಗಳು ಇಂದು ಪ್ರವಾಸಿ ತಾಣವಾದ ಹಂಪಿಯಲ್ಲಿ ಹನ್ನೆರಡು ಕಿಲೋಮೀಟರ್ ದೂರದ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಆರು ಗಂಟೆಗೆ ಹಂಪೆಯ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾಯಿತು. ಇದರ ಮುಖ್ಯ ಉದ್ದೇಶ ಪರಿಸರವನ್ನು ಸಂರಕ್ಷಿಸುವುದು ಪ್ರತಿ ಮೂರು ತಿಂಗಳಿಗೊಮ್ಮೆ ಈ ತರನಾದ ಪರಿಸರ ನಡಿಗೆ ಮತ್ತು ಪ್ರವಾಸಿ ತಾಣಗಳ ಭೇಟಿ ಮಾಡಲಾಗುತ್ತದೆ ಮತ್ತು ಅದರ ಸಂರಕ್ಷಣೆಗೆ ಹೋರಾಟ ಮಾಡಲಾಗುತ್ತಿದೆ.
ಕಿರ್ಲೋಸ್ಕರ್ ವಸುಂಧರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಯೋಜನೆಯಡಿಯಲ್ಲಿ ಐತಿಹಾಸಿಕ ಹಂಪೆಯ ಎದುರು ಬಸವ ಸಭಾಂಗಣದಿಂದ ಪರಿಸರ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾದ ಸಂದರ್ಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷರಾದ ನಾರಾಯಣ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಣಕಾಸು ಮುಖ್ಯಸ್ಥರಾದ ಶ್ರೀವತ್ಸನ್ ಮತ್ತು ವಿಭಾಗದ ಉಪಾಧ್ಯಕ್ಷರಾದ ಚಂದ್ರಶೇಖರ್ ಇಂತೂರಿ ಹಾಗೂ ಲೇಡೀಸ್ ಕ್ಲಬ್ ಸದಸ್ಯರು ಮುಂದಾಳತ್ವ ವಹಿಸಿದ್ದರು. ಹಂಪೆಯ ಅನೇಕ ಸ್ಥಳಗಳಲ್ಲಿ ಬೆಳಿಗಿನ ಸಂದರ್ಭದಲ್ಲಿ ಪರಿಸರದ ಚಿತ್ರಣವನ್ನು ಸೆರೆಹಿಡಿಯಲಾಯಿತು.
ವರದಿ: ಮುರುಳೀಧರ್ ನಾಡಿಗೇರ್, ಕೊಪ್ಪಳ
Get in Touch With Us info@kalpa.news Whatsapp: 9481252093
Discussion about this post