ಮಡಿಕೇರಿ: ಭಾರಿ ಮಳೆ ಹಾಗೂ ತೀವ್ರ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಕೊಡಗು ಹಾಗೂ ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು.
Donations for flood relief can be made by cheque or DD drawn in favour of
Chief Minister’s Calamity Relief Fund
And sent to
Chief Minister’s Calamity Relief Fund
Room No.235
Second floor,
Vidhana Soudha
Bangalore 560001#KarnatakaRains#KodaguFloodRelief #Kodaguflood pic.twitter.com/gH9Ks2UWF5— CM of Karnataka (@CMofKarnataka) August 18, 2018
ಎಲ್ಲೆಲ್ಲಿ ಪ್ರವಾಹ ಅಬ್ಬರಿಸಿದೆಯೋ ಆ ಎಲ್ಲಾ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ಖುದ್ದು ವಸ್ತು ಸ್ಥಿತಿಯನ್ನು ಪರಿಶೀಲನೆ ನಡೆಸಿದರು.
ಅತಿವೃಷ್ಟಿಗೆ ಒಳಗಾದ ಕೊಡಗು ಜಿಲ್ಲೆಯ ಪರಿಸ್ಥಿತಿ ಪರಿಶೀಲಿಸಲು ರಸ್ತೆಮಾರ್ಗವಾಗಿ ಹೊರಡುವ ಮುನ್ನ ಮುಖ್ಯಮಂತ್ರಿಗಳು ಪಿರಿಯಾಪಟ್ಟಣದಲ್ಲಿ ಬಂದಿಳಿದರು#KarnatakaRains #KodaguFloods pic.twitter.com/ZTmsVWt7hz
— CM of Karnataka (@CMofKarnataka) August 18, 2018
ಇನ್ನು, ಪ್ರವಾಹ ಪರಿಸ್ಥಿತಿಯ ಕುರಿತಂತೆ ಉನ್ನತಾಧಿಕಾರಿಗಳ ಸಭೆ ನಡೆಸಿದ ಸಿಎಂ, ಪಶ್ಚಿಮಘಟ್ಟ ಭಾಗದಲ್ಲಿ ಭೂಪರಿವರ್ತನೆ ಕಾರ್ಯಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಸೂಚಿಸಿದ್ದು, ಅತಿವೃಷ್ಟಿಯಿಂದ ಆಗಿರುವ ಸಮಸ್ಯೆಗಳಿಗೆ ಪ್ರಕೃತಿ ವಿಕೋಪದೊಂದಿಗೆ ಮಾನವ ನಿರ್ಮಿತ ಲೋಪದೋಷಗಳೂ ಕಾರಣ ಎನ್ನುವ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ, ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಮಡಿಕೇರಿಯಲ್ಲಿ ಅತಿವೃಷ್ಟಿಯ ಅಬ್ಬರಕ್ಕೆ ನೊಂದ ನಿರಾಶ್ರಿತರಿಗಾಗಿ ಆರಂಭಿಸಿರುವ ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನೊಂದವರಿಗೆ ಸಾಂತ್ವನ ಹೇಳಿದರು.#KarnatakaRains#KodaguFloods pic.twitter.com/9GcEOAHjxA
— CM of Karnataka (@CMofKarnataka) August 18, 2018
ಇನ್ನು ಈ ಕುರಿತಂತೆ ಟ್ವೀಟ್ ಮಾಡಿರುವ ಸಿಎಂ ಅಧಿಕೃತ ಕಚೇರಿ ಅಧಿಕಾರಿಗಳು, ಅತಿವೃಷ್ಟಿ ಪ್ರದೇಶಗಳಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಇದುವರೆಗೆ 3500 ಜನರನ್ನು ರಕ್ಷಿಸಲಾಗಿದೆ. ಈಗ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ್ದೇನೆ. ಜೋಡುಪಾಲದಲ್ಲಿ 347 ಜನರನ್ನು ರಕ್ಷಿಸಲಾಗಿದೆ. ಕೊಡಗು ಭಾಗದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 31 ಗಂಜಿ ಕೇಂದ್ರಗಳಲ್ಲಿ 2250 ಜನರು ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಮಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಬಿರುಕು ಬಿಟ್ಟಿದ್ದು ಕುಸಿಯುತ್ತಿರುವುದರಿಂದ ತಾಂತ್ರಿಕ ತಜ್ಞರನ್ನು ನಿಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು, ಸಂತ್ರಸ್ತರ ದಾಖಲೆಗಳು ನಾಶವಾಗಿದೆ. ತಕ್ಷಣವೇ ಅವುಗಳ ನಕಲು ಪ್ರತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.
Discussion about this post