ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾಗಮಂಡಲ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಇಂದು ಮುಂಜಾನೆ ಕಾವೇರಿ ತೀರ್ಥೋದ್ಭವವಾಗಿದ್ದು, ಶರನ್ನವರಾತ್ರಿ ಅಧಿಕೃತವಾಗಿ ಆರಂಭವಾಗಿದೆ.
ಇಂದು ಮುಂಜಾನೆ 7.03 ಗಂಟೆಗೆ ಕನ್ಯಾ ಲಗ್ನದಲ್ಲಿ ತೀರ್ಥೋದ್ಭವವಾಗಿದ್ದು, ಬ್ರಹ್ಮಕುಂಡಿಕೆಯಲ್ಲಿ ಪುರೋಹಿತರಾದ ಗೋಪಾಲ ಕೃಷ್ಣ ಆಚಾರ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾಗಿದೆ. ಈ ಮೂಲಕ ಕೊಡಗಿನಲ್ಲಿ ಸಾಂಪ್ರದಾಯಿಕ ಶರನ್ನವರಾತ್ರಿಗೆ ಅಧಿಕೃತ ಚಾಲನೆ ದೊರೆತಿದೆ.
ಕೊರೋನಾ ಸೋಂಕಿನ ಭೀತಿಯಿರುವ ಹಾಗೂ ಕೋವಿಡ್19 ನಿಯಮಾವಳಿಗಳ ಹಿನ್ನೆಲೆಯಲ್ಲಿ ತೀರ್ಥೋದ್ಬವದ ವೇಳೆ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತಲಕಾವೇರಿಯಲ್ಲಿ ಭಕ್ತರಿಗೆ ತೀರ್ಥ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post