ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಲ್ಕತ್ತಾ: ಬಿಜೆಪಿ ನಾಯಕರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾರೆಯೇ ಹೊರತು, ‘ಜೈ ಸಿಯಾ ರಾಮ್’ ಎಂದು ಹೇಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನರು, ಬಿಜೆಪಿಗೆ ಮತ ಹಾಕಿದರೆ ತಮ್ಮ ಧರ್ಮ ಆಚರಣೆಗೆ ಅವಕಾಶ ಇರುವುದಿಲ್ಲ ಎಂದು ಅವರು ಆರೋಪಿಸಿದರು. ಜರಗ್ ರಾಂನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಓಟು ಹಾಕಿ ಅವರನ್ನು ಗೆಲ್ಲಿಸಿದರೆ, ನಿಮ್ಮ ಧರ್ಮವನ್ನು ನೀವು ಆಚರಿಸಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಆಗ ‘ಜೈ ಶ್ರೀರಾಮ್’ ಎಂದು ಮಾತ್ರ ಹೇಳಬೇಕಾಗುತ್ತದೆ. ಜೈ ಸಿಯಾ ರಾಮ್ ಎಂದು ಹೇಳುವ ಅವಕಾಶ ಇರುವುದಿಲ್ಲ. ಬಿಜೆಪಿ ನಾಯಕರು ಕೂಡ ‘ಜೈ ಶ್ರೀರಾಮ್’ ಎಂದು ಮಾತ್ರ ಹೇಳುತ್ತಾರೆ ಎಂದು ಮಮತಾ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರಿಗೆ ತಿಳಿಸಿದರು.

ಮಾರ್ಚ್ 15 ರಿಂದ ಏಪ್ರಿಲ್ 17 ರವರೆಗೆ ಒಟ್ಟು ಎಂಟು ಹಂತಗಳಲ್ಲಿ ಪಶ್ಚಿಮ ಬಂಗಾಳ ವಿದಾನಸಭಾ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post