ಕಲ್ಪ ಮೀಡಿಯಾ ಹೌಸ್ | ಕೂನೂರು |
ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವಥ್ ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ತಮಿಳುನಾಡಿನಲ್ಲಿ ಪಥನಗೊಂಡಿದ್ದು, ಅಲ್ಲಿನ ಚಿತ್ರಗಳು ಭೀಕರತೆಯನ್ನು ಸಾರುತ್ತಿವೆ.
ಊಟಿ ಬಳಿಯ ಕೂನೂರು ಪ್ರದೇಶದಲ್ಲಿ ಹೆಲಿಕಾಪ್ಟರ್ ಪಥನಗೊಂಡಿದ್ದು, ಇದು ಅಪ್ಪಳಿಸಿರುವ ರಭಸಕ್ಕೆ ಇಡಿಯ ಚಾಪ್ಟರ್ ಬಹುತೇಕ ಸುಟ್ಟುಹೋಗಿದ್ದು, ಘಟನೆಯ ತೀವ್ರತೆಯನ್ನು ತೆರೆದಿಡುತ್ತಿದೆ.
ಪಥನಗೊಂಡ ಹೆಲಿಕಾಪ್ಟರ್’ನಲ್ಲಿ ಸೇನಾ ಮುಖ್ಯಸ್ಥರೊಂದಿಗೆ 5-6 ಹಿರಿಯ ಅಧಿಕಾರಿಗಳು ಇದ್ದರು ಎಂದು ಹೇಳಲಾಗಿದ್ದು, ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಗೊಂಡಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post