ಕಲ್ಪ ಮೀಡಿಯಾ ಹೌಸ್
ಕೊಪ್ಪಳ: ಜನರ ಪ್ರೀತಿ, ಅಭಿಮಾನಗಳೇ ನಮಗೆ ದೊಡ್ಡ ಪ್ರಶಸ್ತಿಯಾಗಿದೆ. ಹೀಗಾಗಿ, ಭಕ್ತರು ನನ್ನ ಹೆಸರನ್ನು ಯಾವುದೇ ಪ್ರಶಸ್ತಿಗೆ ನಮ್ಮ ಹೆಸರನ್ನು ಸೂಚಿಸಬೇಡಿ ಎಂದು ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಮನವಿ ಮಾಡಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಕುರಿತಂತೆ ಸಂಸ್ಥಾನ ಗವಿಮಠದಿಂದ ಪ್ರಕಟಣೆ ಹೊರಡಿಸಿದ್ದು, ದೇವನ ಕರುಣೆಯಿಂದ ಮಾನವನಾಗಿ ಜನ್ಮತಾಳಿದ್ದೆ ಒಂದು ದೊಡ್ಡ ಪ್ರಶಸ್ತಿ ಇರುವಾಗ ಉಳಿದ ಪ್ರಶಸ್ತಿಗಳ ಹಂಗೇಕೆ? ಜನರ ಪ್ರೀತಿ, ಅಭಿಮಾನಗಳೇ ಎನಗೆ ದೊಡ್ಡ ಪ್ರಶಸ್ತಿ. ಹಾಗಾಗಿ ಭಕ್ತರು ನನ್ನ ಹೆಸರನ್ನು ಯಾವುದೇ ಪ್ರಶಸ್ತಿಗೆ ಸೂಚಿಸಬಾರದು ಎಂದಿದ್ದಾರೆ.
ಪ್ರಕೃತಿ ನಮಗೆ ಕೊಟ್ಟಿರುವುದು ಎರಡೇ ಆಯ್ಕೆ. ಒಂದು ಇರುವುದನ್ನು ಪ್ರೇಮದಿಂದ ಕೊಟ್ಟು ಹೋಗಬೇಕು. ಇಲ್ಲವೇ ಅನಿವಾರ್ಯವಾಗಿ ಬಿಟ್ಟು ಹೋಗಬೇಕು. ದೇಹ, ಮನ, ಬುದ್ಧಿಭಾವಗಳನ್ನು ಬೆಳೆಸಿಕೊಂಡು ಸುಂದರವಾದ ದೇವನ ಸೃಷ್ಟಿಯನ್ನು ಮತ್ತಷ್ಟು ಸುಂದರಗೊಳಿಸುವುದಕ್ಕೆ ಈ ಜೀವನವನ್ನೇ ಕೊಡಬೇಕು. ನನ್ನದು ಎನ್ನುವುದು ಏನಿದೆಯೋ ಅದೆಲ್ಲಾ ಇಲ್ಲಿಯೇ ಬಿಟ್ಟು ಹೋಗಬೇಕು. ಇಲ್ಲಿ ನನಗೆ ಉಳಿದ ಆಯ್ಕೆ ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡುವ ನಿಷ್ಕಾಮಕರ್ಮ ಮಾತ್ರ. ಪ್ರೇಮ ಮತ್ತು ಸೇವೆ ನನ್ನ ಗುರುಗಳು ಅಪ್ಪಣೆ ಕೊಡಿಸಿದ ಧರ್ಮದ ಎರಡು ಆಯಾಮಗಳು. ಮತ್ತು ಇದೇ ರೀತಿಯಾಗಿ ಬದುಕಲು ಅಪ್ಪಣೆ ಕೊಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post