ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್. ವಿ. ಗುಮಾಸ್ತೆಯವರು ಧ್ವಜಾರೋಹಣ ಮಾಡುವುದರ ಮೂಲಕ ಎಲ್ಲರಿಗೂ ಶುಭಾಶಯಗಳು ಕೋರಿದರು.
ಪ್ರಾರಂಭದಲ್ಲಿ ಕಳೆದ ಮೂರು ದಿನಗಳ ಹಿಂದೆ ನಿಧನ ಹೊಂದಿದ ಕನ್ನಡದ ಮೇರುನಟ ದಿವಂಗತ ಡಾ. ರಾಜಕುಮಾರ ಅವರ ಪುತ್ರ ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್. ವಿ. ಗುಮಾಸ್ತೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಖಾನೆಯ ಅಭಿವೃದ್ಧಿಯಲ್ಲಿ ತಮ್ಮ ಶ್ರಮ ಹೆಚ್ಚಾಗಿದ್ದು, ಮುಂದಿನ ದಿನದಲ್ಲಿ ಹೆಚ್ಚಿನ ಮಟ್ಟದಲ್ಲಿ ಸ್ಪರ್ಧೆ ಇರುತ್ತದೆ. ದಿವಂಗತ ಸರ್. ಎಂ. ವಿಶ್ವೇಶ್ವರಯ್ಯ ನವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರೆಯಬೇಕಾಗಿದೆ. ಈ ಸಂದರ್ಭದಲ್ಲಿ ಕನ್ನಡ ನಾಡಿಗೆ ಶ್ರಮಿಸಿದ ದಿಗ್ಗಜರನ್ನು ನೆನೆಯುತ್ತ ಕೆಲಸ ನಿರ್ವಹಿಸಬೇಕು ಎಂದು ಅನೇಕ ಬಾರಿ ಸರ್. ಎಂ. ವಿಶ್ವೇಶ್ವರಯ್ಯನವರನ್ನು ನೆನೆದು ಅವರ ಕೆಲಸ ಕಾರ್ಯವನ್ನು ಸ್ಮರಿಸಿ ಶುಭಾಶಯವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಅನೇಕ ಉದ್ಯೋಗಿಗಳು ಮತ್ತು ಗುತ್ತಿಗೆ ಕೆಲಸಗಾರರಿಗೆ ಅವರ ಸೇವೆಯನ್ನು ಮೆಚ್ಚಿ ಬಹುಮಾನವನ್ನು ನೀಡಲಾಯಿತು.
ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳನ್ನು ಒಳಗೊಂಡಿತ್ತು. ಈಗ ಅದು 31 ಜಿಲ್ಲೆಯಾಗಿ ರೂಪುಗೊಂಡಿದ್ದು, ಎಲ್ಲೆಡೆಯೂ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ಸಮಯದಲ್ಲಿ ಪ್ರಥಮ ಆದ್ಯತೆಯಾಗಿ ಆಶ್ವಾಸನೆ ನೀಡಿದಂತೆ ನೂತನ ವಿಜಯನಗರ ಜಿಲ್ಲೆ ಮಾಡುವ ಕನಸು ನನಸಾಗಿಸಿದ್ದರಿಂದ ಇಂದು ವಿಜಯನಗರ ಜಿಲ್ಲೆಯಲ್ಲಿ ಪ್ರಥಮವಾಗಿ ರಾಜ್ಯೋತ್ಸವ ಆಚರಣೆಯಾಗುತ್ತಿದೆ.
ಕನ್ನಡ ರಾಜ್ಯೋತ್ಸವ ಇತಿಹಾಸ:
ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಇಂದಿನ ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು. ಸ್ವಾತಂತ್ರದ ನಂತರ, ಒಡೆಯರ್ ಮಹಾರಾಜ ಭಾರತದ ಭಾಗವಾಗಲು ಸಮ್ಮತಿಸಿದರು. 1950ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು ಹಾಗು ಪೂರ್ವ ಮಹಾರಾಜ 1957ರವರಗೆ ರಾಜ್ಯಪಾಲರಾದರು.
ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ 1956 ರಾಜ್ಯ ಪುನರ್‌ಸಂಘಟನೆ ಕಾಯಿದೆ ಯೊಂದಿಗೆ ಮುಕ್ತಾಯವಾಯಿತು. ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ನಾಮಕರಣ ಮಾಡಲಾಯಿತು.
ಕಾರ್ಖಾನೆಯ ಹಿರಿಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕೆಲಸಗಾರರು ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯ ಭಾರತ ಜನನಿಯ ತನುಜಾತೆ ಕನ್ನಡ ಭಾಷೆಗೆ ಉತ್ತೇಜನವನ್ನು ನೀಡಿ ಸಂತಸವನ್ನು ಹಂಚಿಕೂಂಡರು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯು ಕಳೆದ ೨೮ ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಿ ನ.1ನೇ ತಾರೀಕು ಧ್ವಜಾರೋಹಣವನ್ನು ಮಾಡುವುದರ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿಕೊಂಡು ಬಂದಿರುತ್ತದೆ.
ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಾದ ಎಂ. ಜಿ.ನಾಗರಾಜ್, ಸಿ. ರಮೇಶ್, ಜಿ.ಎಸ್. ಕೃಷ್ಣಮೂರ್ತಿ ಮತ್ತು ಕಿರಣ್ ಶೇಜೆಕರ್, ಕಾರ್ಮಿಕ ಸಂಘದ ಶರಣಪ್ಪ , ಬಸವರಾಜ್ ಕಂಠಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮ ನಿರೂಪಣೆ ಮಾಡಿದ ಸುರಕ್ಷತಾ ವಿಭಾಗದ ಹಿರಿಯ ಅಧಿಕಾರಿ ಎಂ.ಎಂ. ನಾಡಿಗೇರ್ ರವರು ತಮ್ಮ ನಿರೂಪಣೆಯಲ್ಲಿ ಇಂದಿನ ದಿನದಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನವನ್ನು ನೀಡಿ ಅಪಘಾತ ರಹಿತ ಕೆಲಸಗಳನ್ನು ಮಾಡಲು ಶುಮಿಸಬೇಕು ಮತ್ತು ಸುರಕ್ಷತೆಯನ್ನು ಮೊದಲ ಆದ್ಯತೆ ಮಾಡಿಕೊಂಡು ಉತ್ಪಾದನೆ, ಗುಣಮಟ್ಟಕ್ಕೆ ಹೆಚ್ಚಿನ ಗಮನ ನೀಡಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ನಮ್ಮ ಕಾರ್ಖಾನೆಗಳಲ್ಲಿ ಸುರಕ್ಷತೆ ಹೆಚ್ಚಿಸಲು ಡುಪಾಂಟ್ ಸೇಪ್ಟಿ ಸೇಲೋಷನ್ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡು ಕಳೆದ ಎರಡು ತಿಂಗಳಿನಿಂದ ಈ ಸಂಸ್ಥೆ ನಮ್ಮ ಮೂರು ಕಡೆ ಇರುವ ಸಂಸ್ಥೆಗಳಾದ ಕೊಪ್ಪಳ, ಸೊಲ್ಲಾಪುರ ಮತ್ತು ಹಿರಿಯೂರು ಪ್ಲಾಂಟ್‌ಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ. ಇದು ಯಶಸ್ಸು ಕಾಣಬೇಕಾದರೆ ತಮ್ಮ ಸಹಕಾರ ಬಹಳ ಮುಖ್ಯ. ಇದಕ್ಕೆ ಸಹಕಾರ ನೀಡಿ ಕಿರ್ಲೋಸ್ಕರ್ ಕಾರ್ಖಾನೆ ಅಪಘಾತ ರಹಿತ ಕಾರ್ಖಾನೆಯಾಗಿ ಕಾರ್ಯ ನಿರ್ವಹಿಸಲು ತಾವು ಮುಂದಾಗಬೇಕು ಎಂದು ತಿಳಿಸಿದರು. ಬರುವ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿ ಸಿಹಿಯನ್ನು ಹಂಚಿ ಕಾರ್ಯಕ್ರಮ ಮುಗಿಸಲಾಯಿತು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post