ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಪರಿಸರ ಸಂರಕ್ಷಣೆ ವಿಭಾಗದಲ್ಲಿ ನೀಡುವ ಪ್ರತಿಷ್ಠಿತ ಗ್ರೀನ್‌ಟೆಕ್ ಪರಿಸರ ಪ್ರಶಸ್ತಿ-2022ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಗೆ ಸಂದಿದ್ದು, ಇದರೊಂದಿಗೆ ಸಿಎಸ್‌ಆರ್, ಸುರಕ್ಷತೆ ಹಾಗೂ ಮಾನವ ಸಂಪನ್ಮೂಲದ ಜೊತೆಗೆ ಸಂರಕ್ಷಣೆಯ ಕುರಿತ ಪ್ರಶಸ್ತಿಗೆ ಭಾಜನವಾಗಿದೆ.
ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯು ಪರಿಸರ ಸಂರಕ್ಷಣೆಯನ್ನು ಸುಧಾರಿಸುವ, ನಾವು ಕೆಲಸ ಮಾಡುವ ಮತ್ತು ವಾಸಿಸುವ ಪರಿಸರದ ಸಂರಕ್ಷಣೆಗಾಗಿ ದೀರ್ಘಕಾಲೀನ ಬದಲಾವಣೆಗಳನ್ನು ಸೃಷ್ಠಿಸುವ ಮತ್ತು ಸುಸ್ಥಿರ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ನವೀನ ಅಭ್ಯಾಸಗಳು ಮತ್ತು ಉಪಕ್ರಮಗಳನ್ನು ಅಳವಡಿಸಿಕೊಂಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Also read: ಬಿಎಸ್ಸಿ ಪ್ರಥಮ ವರ್ಷದ ಫ್ಯಾಶನ್ ಡಿಸೈನ್ ಪದವಿ ಕೋರ್ಸ್‍ಗಳ ಪ್ರವೇಶಾತಿ ಪ್ರಾರಂಭ
ಅಲ್ಲದೇ, ಅಸ್ಸಾಂ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾಕ್ಟರ್ ಅರುಪ್ ಕುಮಾರ್ ಮಿಶ್ರಾ, ಓಎನ್‌ಜಿಸಿ ಲಿಮಿಟೆಡ್‌ನ ಮಾಜಿ ನಿರ್ದೇಶಕರು ಹಾಗೂ ಐಐಎಮ್-ರೋಹ್‌ಟಕ್‌ನ ವೇದಪ್ರಕಾಶ್ ಮಹಾವರ್ ಮತ್ತು ನವದೆಹಲಿಯ ಗ್ರೀನ್‌ಟೆಕ್ ಫೌಂಡೇಶನ್‌ನ ಅಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕಮಲೇಶ್ವರ್ ಶರಣ್ ಇವರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಸ್ಸಾಂ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ರವಿಶಂಕರ್ ಪ್ರಸಾದ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.

ಎಲ್ಲಾ ಉದ್ಯೋಗಿಗಳು ಸಂಸ್ಥೆಯ ದೃಷ್ಠಿಕೋನ, ಗುರಿ ಹಾಗೂ ಮೌಲ್ಯಗಳನ್ನೊಳಗೊಂಡAತೆ ಕಾರ್ಯಕ್ಷಮತೆಯ ಮೂಲಕ ಕೆಲಸ ನಿರ್ವಹಿಸಿದುದ್ದಕ್ಕಾಗಿ ಈ ಪ್ರಶಸ್ತಿಯು ಕಾರ್ಖಾನೆಗೆ ಲಭಿಸಿರುತ್ತದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆಯವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.










Discussion about this post