ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ರಾಜ್ಯದ ಪ್ರತಿಷ್ಠಿತ ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçÃಸ್ ಲಿಮಿಟೆಡ್, ಬೀಡುಕಬ್ಬಿಣ ಮತ್ತು ಫೌಂಡ್ರಿಯ ವಿಸ್ತರಣೆ ಹಾಗೂ ನೂತನ ಯೋಜನೆಗಳಿಗೆ ಸ್ಥಳೀಯ ಎಲ್ಲ ವಲಯಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಗ್ರಾಹಕರ ಅತ್ಯಗತ್ಯ ಬೇಡಿಕೆಗಳನ್ನು ಪೂರೈಸಲು ಈ ಕಾರ್ಖಾನೆಯು ಪ್ರಸ್ತುತ ಇರುವ ಬೀಡುಕಬ್ಬಿಣ ಮತ್ತು ಫೌಂಡ್ರಿಯ ಪ್ರಸ್ತಾವಿತ ವಿಸ್ತರಣೆ ಹಾಗೂ ಹೊಸ ಯೋಜನೆಗಳ ಅನುಮತಿಗಾಗಿ ಯೋಜನೆಯ ಪ್ರಸ್ತಾವಿತ ಪ್ರದೇಶದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಎಲ್ಲ ವಲಯಗಳಿಂದ ಬೆಂಬಲ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಅನೇಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮಾತನಾಡಿ, ಉದ್ದೇಶಿತ ಯೋಜನೆಗಳಿಗೆ ತಮ್ಮ ಸಹಮತಿ ಇದೆ. ಕಾರಣ ಈ ಯೋಜನೆಗಳು ಅನುಸ್ಠಾನಗೊಂಡಲ್ಲಿ ಈ ಭಾಗದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತವೆ, ಯುವಕರಿಗೆ ಉದ್ಯೋಗಗಳು ಸಿಗುತ್ತವೆ ಎಂದಿದ್ದಾರೆ.
ಕಾರ್ಖಾನೆಯ ಸಮುದಾಯದ ಅಭಿವೃದ್ಧಿಗಾಗಿ ಮಾಡುವ ಕೆಲಸಗಳಿಂದ ಜನರ ಆರ್ಥಿಕ ಮಟ್ಟ ಹೆಚ್ಚುತ್ತದೆ. ಇದರಿಂದ ರಾಜ್ಯಮತ್ತು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಅನೂಕೂಲವಾಗಲಿದೆ. ಕೊಪ್ಪಳ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರದ ವಲಯದ ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ್, ಕೊಪ್ಪಳದ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳಾದ ವೈ.ಎಸ್. ಹರಿಶಂಕರ್, ಕಾರ್ಖಾನೆಯ ಉನ್ನತ ಅಧಿಕಾರಿಗಳು, ಜಿಲ್ಲಾಡಳಿತ ಸಿಬ್ಬಂದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳಿಂದ ಬಂದ ಪ್ರತಿನಿಧಿಗಳು, ಸ್ಥಳಿಯ ಗ್ರಾಮಗಳ ವಿವಿಧ ನಾಗರೀಕರು, ಸಾರ್ವಜನಿಕರು ಹಾಜರಿದ್ದರು.
Also read: ಶಿಸ್ತುಬದ್ಧ ಅಧ್ಯಯನದಿಂದ ಯಶಸ್ಸು ಸಾಧ್ಯ: ಖುಷಿ ಅಭಿಪ್ರಾಯ
ವೈ.ಎಸ್. ಹರಿಶಂಕರ್ ಅವರು ಮಾತನಾಡಿ, ಕಾರ್ಖಾನೆ ವಿಸ್ತರಣೆಯ ಕುರಿತು ವಿವರಿಸಿದರು.
ಕಾರ್ಖಾನೆಯ ಪರಿಸರ ಅಧಿಕಾರಿಗಳಾದ ಮಹಮದ್‌ಅಜೀಜ್ ವiತ್ತು ತಾಂತ್ರಿಕ ಅಧಿಕಾರಿಯಾದ ಶ್ರೀಕಾಂತ್ ಇವರುಗಳು ಯೋಜಿತ ವಿಸ್ತರಣೆಯ ಕುರಿತು ಸಭೆಗೆ ಮಾಹಿತಿಯನ್ನು ಅಂಕಿ-ಅAಶಗಳ ಸಹಿತ ವಿವರಿಸಿದರು. ಕಂಪನಿಯ ಮಾನವ ಸಂಪನ್ಮೂಲ, ಆಡಳಿತ, ಇಎಚ್’ಎಸ್ ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ಪಿ. ನಾರಾಯಣರವರು ಅಚ್ಚು ಕಟ್ಟಾಗಿ ರೂಪಿಸಿದ್ದರು.
ಯೋಜನೆಯ ವಿಸ್ತರಣೆಯ ಮಾಹಿತಿಯನ್ನು ತಿಳಿಸಿದ ನಂತರ ಪರಿಸರ ಅಧಿಕಾರಿಗಳು ಸಾರ್ವಜನಿಕರು ಮನವಿ ಮತ್ತು ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆ ಕೊಪ್ಪಳ, ಶ್ರೀ ಗ್ರಾಮದೇವತೆ ಸೇವಾ ಸಮಿತಿ, ಹಳೆ ಕನಕಾಪುರ, ಬಹುಗ್ರಾಮ ಪಂಚಾಯಿತಿಗಳ ತ್ಯಾಜ್ಯ ಸಂಸ್ಕರಣಾ ಘಟಕ ಜಂಟಿ ಸಮಿತಿ, ನೀರು ಬಳಕೆದಾರರ ಸಂಘ, ಹುಲಿಗಿ, ಪರಿಸರ ಹಿತರಕ್ಷಣಾ ಸಂಸ್ಥೆಯಾದ ವನಲೋಕ, ಬೆಂಗಳೂರು, ಸರ್ವೋದಯ ಸಮಗ್ರಗ್ರಾಮೀಣಅಭಿವೃದ್ಧಿ ಸಂಸ್ಥೆ, ಕೊಪ್ಪಳ, ಮಾರಿಕಾಂಬ ಗ್ರಾಮೀಣಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘ, ಹೊಸಪೇಟೆ ಕರ್ನಾಟಕ ರಕ್ಷಣಾ ವೇದಿಕೆ, ಪ್ರಣತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬಣವಿಕಲ್ಲು, ದೀಪಾ ಸಂಜೀವಿನಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ವಿಜಯನಗರ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ಧ್ರವ ಪರಿಸರ ಮಾಲಿನ್ಯ ನಿಯಂತ್ರಣ ಸಂರಕ್ಷಣಾ ಸಂಸ್ಥೆ, ಕೊಪ್ಪಳ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಮುಂಡರಗಿ ಶ್ರೀ ಮಾರುತೇಶ್ವರ ಸೇವಾ ಸಮಿತಿ, ಬೇವಿನಹಳ್ಳಿ ಹಾಗೂ ಹಿಟ್ನಾಳ್ ಗ್ರಾಮ ಪಂಚಾಯತಿಗಳು ಇತ್ಯಾದಿ ಅನೇಕ ಸಂಘ-ಸAಸ್ಥೆಗಳು ಸಾರ್ವಜನಿಕರು ಪ್ರಸ್ತಾವಿತ ಯೋಜನೆಗಳಿಗೆ ಸಮ್ಮತಿ ಸೂಚಿಸಿ ಮನವಿ ಪತ್ರಗಳನ್ನು ಈ ಸಭೆಯಲ್ಲಿ ನೀಡಿದರು ಹಾಗೂ ಕೆಲವರು ಮಾತನಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಜನ ಹಲವಾರು ಬೇಡಿಕೆಗಳಿಗಾಗಿ ಆಗ್ರಹಿಸಿದರು.
ಕಾರ್ಖಾನೆ ಹಿನ್ನೆಲೆ
ಕಿರ್ಲೋಸ್ಕರ್ ಕಾರ್ಖಾನೆಯು ಕೊಪ್ಪಳದ ಬೇವಿನಹಳ್ಳಿ ಗ್ರಾಮದ ಹತ್ತಿರ ಸುಮಾರು 30 ವರ್ಷಗಳ ಹಿಂದೆ ಬೀಡುಕಬ್ಬಿಣ ಮತ್ತು ಫೌಂಡ್ರಿ ಘಟಕಗಳನ್ನು ಸ್ಥಾಪಿತವಾಗಿದೆ.
ಶ್ರೇಷ್ಠ ಮಟ್ಟದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೀಡುಕಬ್ಬಿಣ ಮತ್ತು ಕ್ಯಾಸ್ಟಿಂಗ್ಸ್’ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಈ ಕಾರ್ಖಾನೆಯು ಉತ್ಪಾದನೆಯನ್ನು ಮಾಡುವುದರ ಜೊತೆಗೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು ಈ ವಲಯದಲ್ಲಿ ಅತ್ಯತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post