ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ರೈಲ್ವೆ ಹಳಿಯ ಮೇಲೆ ಮದ್ಯ ಪಾರ್ಟಿ ಮಾಡಿ ಅಲ್ಲೇ ಮೈಮೇಲೆ ಎಚ್ಚರ ಇಲ್ಲದಂತೆ ಮಲಗಿದ್ದ ಮೂವರು ರೈಲು ಹರಿದು ಸಾವನ್ನಪ್ಪಿರುವ ಘಟನೆ ಗಂಗಾವತಿ ನಗರದ ಹೊರವಲಯದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಘಟನೆ ನಡೆದಿದ್ದು, ರೈಲು ಹರಿದಿದ್ದರಿಂದ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಗಂಗಾವತಿ ನಗರದ ನಿವಾಸಿಗಳಾದ ಮೌನೇಶ್ ಪತ್ತಾರ (23), ಸುನೀಲ್ (23), ವೆಂಕಟ್ ಭೀಮನಾಯ್ಕ (20) ಎಂದು ಗುರುತಿಸಲಾಗಿದೆ.
Also read: ಕಾರ್ಗಿಲ್ ವಿಜಯ | ರೇಡಿಯೋ ಶಿವಮೊಗ್ಗದಿಂದ 12 ಗಂಟೆಗಳ ವಿಶೇಷ ಲೈವ್ ಕಾರ್ಯಕ್ರಮ
ನಿನ್ನೆ ರಾತ್ರಿ 9:30ಕ್ಕೆ ಹುಬ್ಬಳ್ಳಿ-ಸಿಂದನೂರು ಎಕ್ಸ್’ಪ್ರೆಸ್ ರೈಲು ಹರಿದಿದ್ದರಿಂದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂವರು ಯುವಕರು ಕಳೆದ ರಾತ್ರಿ ರೈಲ್ವೆ ಹಳಿ ಬಳಿಯೇ ಪಾರ್ಟಿ ಮಾಡಿ, ನಂತರ ಹಳಿ ಮೇಲೇ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post