ಉಡುಪಿ: ಜಗನ್ನಿಯಾಮಕ ಶ್ರೀಕೃಷ್ಣ ಪರಮಾತ್ಮನ ಜನ್ಮಾಷ್ಟಮಿಯನ್ನು ಇಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಉಡುಪಿ ಶ್ರೀಕೃಷ್ಣ ಮಠ ಜನ್ಮಾಷ್ಟಮಿ ಆಚರಣೆಗೆ ಸಕಲ ರೀತಿಯಿಂದಲೂ ಸಜ್ಜಾಗಿದ್ದು, ಇಂದು ನಸುಕಿನಿಂದಲೇ ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ.
ಪರ್ಯಾಯ ಫಲಿಮಾರು ಶ್ರೀಗಳು ಇಂದು ಕೃಷ್ಣನಿಗೆ ವಿಶೇಷ ಅಭಿಶೇಕ, ಪೂಜೆ, ಹಾಗೂ ಬಾಲಕೃಷ್ಣನ ಅಲಂಕಾರ ನೆರವೇರಿಸಿದರು. ಜನ್ಮಾಷ್ಟಮಿ ಪ್ರಯುಕ್ತ ಇಂದು ರಾತ್ರಿ ಶ್ರೀಗಳು ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಲಿದ್ದಾರೆ.
ಇನ್ನು, ಜನ್ಮಾಷ್ಟಮಿ ಪ್ರಯುಕ್ತ ಮಠ ಹಾಗೂ ಪ್ರಾಂಗಣವನ್ನು ವಿಶೇಷವಾಗಿ ಸಿಂಗರಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಕೃಷ್ಣನ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ.
ಚಿತ್ರಗಳನ್ನು ನೋಡಿ:
Discussion about this post