ಶಿವಮೊಗ್ಗ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶಿವಮೊಗ್ಗ ಆರ್ಟ್ ಆಫ್ ಲಿವಿಂಗ್ ವತಿಯಿಂದ ಸೆ.2ರಂದು ಕೃಷ್ಣಗಾನ ವೈಭವ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಅಂದು ಸಂಜೆ 6.30ರಿಂದ ವಿಶೇಷ ಕಾರ್ಯಕ್ರಮ ಆರಂಭವಾಗಲಿದ್ದು, ಆರ್ಟ್ ಆಫ್ ಲಿವಿಂಗ್‌ನ ಸೂರ್ಯಪಾದ ಸ್ವಾಮೀಜಿ ಅವರ ನೇತೃತ್ವದಲ್ಲಿ ಗಾಯನ ಕಾರ್ಯಕ್ರಮ ನಡೆಯಲಿದೆ. ಸಾಮೂಹಿಕ ಭಜನೆ, ಧ್ಯಾನ ಹಾಗೂ ತತ್ವಪದಗಳ ಗಾನಾಮೃತ ಹರಿಯಲಿದೆ.
ಶಿವಮೊಗ್ಗ ಆರ್ಟ್ ಆಫ್ ಲಿವಿಂಗ್‌ನಿಂದ ಪ್ರತಿವರ್ಷ ನಡೆಯುವ ಈ ಕೃಷ್ಣಗಾನ ವೈಭವ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಪ್ರಸಿದ್ದವಾಗುತ್ತಿದ್ದು, ಈ ವೈಭವವನ್ನು ಕೃಷ್ಣನಿಗೇ ಸಮರ್ಪಣೆ ಮಾಡಲಾಗುತ್ತದೆ.
ಈ ಕಾರ್ಯಕ್ರಮಕ್ಕೂ ಮೊದಲು 6 ಗಂಟೆಯಿಂದ ಎಲ್ಲ ಭಜನಾ ಮಂಡಳಿಗಳ ಮಾತೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣೆ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ: 9964072793, 8310876277ಗೆ ಸಂಪರ್ಕಿಸಬಹುದು.
Discussion about this post