ಕಲ್ಪ ಮೀಡಿಯಾ ಹೌಸ್ | ಕುಲ್ಗಾಮ್ |
ಗಡಿ ಭಾಗದಲ್ಲಿ ಉಗ್ರರ ವಿರುದ್ಧ ಸಮರ ಸಾರಿರುವ ಭಾರತೀಯ ಸೇನಾ ಯೋಧರು ನಡೆಸಿದ ಎನ್’ಕೌಂಟರ್’ನಲ್ಲಿ ಐವರು ಲಷ್ಕರ್-ಎ-ತೊಯ್ಬಾ Lashkar E Taiba ಉಗ್ರರನ್ನು ಹೊಡೆದುರುಳಿಸಿದೆ.
ಜಮ್ಮು ಕಾಶ್ಮೀರದ ಕುಲ್ಗಾಮ್’ನಲ್ಲಿ ಇಂದು ಉಗ್ರರು ಅಡಗಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಸಹಯೋಗದಲ್ಲಿ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಜಿಲ್ಲೆಯ ಸಾಮ್ನೂ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್’ಕೌಂಟರ್ ನಡೆದಿದೆ.

Also read: ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವು: ಪ್ರಧಾನಿ ಮೋದಿ ಖಂಡನೆ
ಸೇನೆಯ 34 ರಾಷ್ಟ್ರೀಯ ರೈಫಲ್ಸ್, ವಿಶೇಷ ಪಡೆಗಳ ಘಟಕ, ಪೊಲೀಸ್ ಮತ್ತು ಸಿಆರ್’ಪಿಎಫ್ ತಂಡಗಳು ಕಾರ್ಯಾಚರಣೆಯನ್ನು ಮಧ್ಯಾಹ್ನದವರೆಗೂ ಮುಂದುವರೆಸಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post