ಹೊಳೆನರಸೀಪುರ: ಪುಲ್ವಾಮಾ ದಾಳಿಯ ಬಗ್ಗೆ ತಮಗೆ ಹತ್ತು ತಿಂಗಳ ಹಿಂದೆಯೇ ಮಾಹಿತಿಯಿತ್ತು ಎಂದಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಓರ್ವ ದೇಶದ್ರೋಹಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ಬಗ್ಗೆ ಹತ್ತು ತಿಂಗಳ ಹಿಂದೆಯೇ ಮಾಹಿತಿಯಿದ್ದಿದ್ದರೆ ಕೇಂದ್ರಕ್ಕೆ ತಿಳಿಸಿದ್ದರೆ, ಯೋಧರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ, ಈ ಮಾಹಿತಿ ನೀಡಿದೇ ಅವರು ದೇಶದ್ರೋಹ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಅಭ್ಯರ್ಥಿ ಎ. ಮಂಜು ಮಾತನಾಡಿ, ಯಡಿಯೂರಪ್ಪ ಕೃಪೆಯಿಂದ ಮೊದಲ ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಬಳಿಕ ಅವರಿಗೆ ಮೋಸ ಮಾಡಿದರು. ಇದೀಗ ಕಾಂಗ್ರೆಸ್ ಬೆಂಬಲ ಪಡೆದು ಮುಖ್ಯಮಂತ್ರಿ ಆಗಿದ್ದಾರೆ. ಸ್ವಂತ ಶಕ್ತಿಯಿಂದ ಗೆಲ್ಲುವ ತಾಕತ್ತಿಲ್ಲದವರು ಎಂದು ನಡೆಸಿದರು.
















