ಕಲ್ಪ ಮೀಡಿಯಾ ಹೌಸ್ | ಕುಂಸಿ(ಶಿವಮೊಗ್ಗ) |
ಇಲ್ಲಿನ ಚೆನ್ನಳ್ಳಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಮಾಲತೇಶ್(28) ಹಾಗೂ ಮಹೇಶ್ ಎನ್ನುವವರ ಪುತ್ರ (16) ಎಂದು ಗುರುತಿಸಲಾಗಿದೆ.

Also read: ಬುದ್ಧ ತತ್ವಗಳ ಅಳವಡಿಕೆಯಿಂದ ಸಾರ್ಥಕ ಬದುಕು ಸಾಧ್ಯ: ಕುಲಸಚಿವ ಮಂಜುನಾಥ್ ಅಭಿಪ್ರಾಯ
ಚನ್ನಹಳ್ಳಿ ಗ್ರಾಮದ ಮಹೇಶ್ ಅವರ ಮಗನಾದ ಅಭಯ್ ಎಂಬ ಯುವಕ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೇಲಕ್ಕೆ ಬರುವಾಗ ಕಾಲು ಜಾರಿ ಪುನಃ ಕೃಷಿಹೊಂಡದ ನೀರಿಗೆ ಬಿದ್ದಿದ್ದಾನೆ. ಮೊದಲೇ ಸುಸ್ತಾಗಿದ್ದ ಅಭಯ್ ನೀರಿನಿಂದ ಮೇಲಕ್ಕೆ ಬರಲಾಗದೆ ಜೋರಾಗಿ ಕಿರುಚಿಕೊಂಡಿದ್ದಾನೆ. ಈ ವೇಳೆ ಅಲ್ಲೇ ಪಕ್ಕದ ಜಮೀನಿನಲ್ಲಿದ್ದ ನೀಲಣ್ಣನವರ ಮಗನಾದ ಮಾಲ್ತೇಶ್ ಎನ್ನುವವರು ಅಭಯ್ ಅವರನ್ನು ರಕ್ಷಣೆ ಮಾಡಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಅಷ್ಟರಲ್ಲೇ ಇವರ ಕಿರಾಚಟಾದ ಶಬ್ದ ಕೇಳಿ ಸ್ಥಳಕ್ಕೆ ಅಕ್ಕ ಪಕ್ಕದ ಜಮೀನಿನಲ್ಲಿದ್ದ ರೈತರು ಕೃಷಿ ಹೊಂಡದಲ್ಲಿ ಬಿದ್ದಿದ್ದ ಅಭಯ್ ಹಾಗೂ ಮಾಲ್ತೇಶನನ್ನು ಮೇಲಕ್ಕೆ ಎತ್ತಿದ್ದಾರೆ. ತತಕ್ಷಣವೇ ಇಬ್ಬರನ್ನೂ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಅಭಯ್ ನೀರಿನಲ್ಲಿ ಮುಳುಗಿ ಸುಸ್ತಾಗಿ ಭಯಗೊಂಡಿರುವುದರಿಂದ ಮಾಲ್ತೇಶನನ್ನು ಬಿಗಿಯಾಗಿ ಅಪ್ಪಿ ಕೊಂಡಿರಬಹುದು ಎಂಬುದು ಸ್ಥಳೀಯರ ಮಾತಾಗಿದೆ. ರಕ್ಷಿಸಲು ಹೋದ ಮಾಲ್ತೇಶನಿಗೆ ಈಜು ಬರುತ್ತಿತ್ತು. ಆದರೂ ಅವನು ಮುಳಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇನ್ನು ಮೃತ ಮಾಲ್ತೇಶನಿಗೆ ಮದುವೆಯಾಗಿ ಈಗಾಗಲೇ ಎಂಟು ತಿಂಗಳಾಗಿತ್ತು. ಅವರ ಹೆಂಡತಿ ತುಂಬು ಗರ್ಭಿಣಿಯಾಗಿದ್ದು ಸ್ಥಳೀಯರ ಅಕ್ರಂದನ ಮುಗಿಲು ಮುಟ್ಟಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post