ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಇತ್ತೀಚಿನ ದಿನಗಳಲ್ಲಿ ಕೋವಿಡ್, ಹೃದ್ರೋಗ, ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಲಸಿಕೆ ಕಂಡುಹಿಡಿಯಲು ಮೂಲವಿಜ್ಞಾನದಿಂದ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸಲಹೆ ನೀಡಿದರು.
Also Read: ಸೊರಬದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ
ಕುವೆಂಪು ವಿವಿಯ ಔದ್ಯೋಗಿಕ ರಸಾಯನ ವಿಜ್ಞಾನ ವಿಭಾಗದಿಂದ ವಿವಿಯ ಬಸವ ಸಭಾಭವನದಲ್ಲಿ ರಸಾಯನವಿಜ್ಞಾನ ಮತ್ತು ಜೀವವಿಜ್ಞಾನದಿಂದ ಸಮಾಜ ಮತ್ತು ಉದ್ಯಮ ಮೇಲೆ ಆಗಿರುವ ಪರಿಣಾಮಗಳು’ ವಿಷಯ ಕುರಿತು ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಸಾಯನ ವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳು ಇಂದು ಬೇರೆಬೇರೆ ವಿಷಯ, ವಿಭಾಗಗಳಾಗಿ ಉಳಿದಿಲ್ಲ. ಸಂಯುಕ್ತ ಪರಿಶ್ರಮದಿಂದ ಸಂಶೋಧನೆ ಕೈಗೊಂಡಲ್ಲಿ ಜೀವಮಾರಕ ರೋಗಗಳಿಗೆ ಔಷಧಿ ಆವಿಷ್ಕಾರ ಸಾಧ್ಯವಾಗಿದೆ ಮತ್ತು ಆಗಲಿದೆ ಎಂದು ತಿಳಿಸಿದರು.
Also Read: ಏಕಾದಶ ಸಂವತ್ಸರೋತ್ಸವ ಸಂಭ್ರಮ | ಮೈಸೂರಿನ ಶ್ರೀ ವೆಂಕಟಾಚಲ ಧಾಮದಲ್ಲಿಂದು ವೈಭವ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಕುವೆಂಪು ವಿವಿಯಲ್ಲಿ ಅಂತರ್‌ಶಿಸ್ತೀಯ ಅಧ್ಯಯನ ಮತ್ತು ಸಂಶೋಧನೆಗೆ ವಿಶೇಷ ಒತ್ತು ನೀಡಲಾಗಿದ್ದು, ಸಂಶೋಧನಾರ್ಥಿಗಳಿಗೆ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಮಲೆನಾಡು ಸೇರಿದಂತೆ ಸ್ಥಳೀಯವಾಗಿ ಭಾದೆ ನೀಡುತ್ತಿರುವ ರೋಗಗಳಿಗೆ ಔಷಧಿ, ಲಸಿಕೆ ಅಭಿವೃದ್ಧಿಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರುಗಳಾದ ಪ್ರೊ.ಕೆ. ವಸಂತ್ ಕುಮಾರ್ ಪೈ, ಪ್ರೊ.ಎಚ್.ಎಸ್. ಭೋಜ್ಯಾನಾಯ್ಕ್, ಪ್ರೊ.ಬಿ.ಈ. ಕುಮಾರಸ್ವಾಮಿ, ಡಾ.ಇಟ್ಟೆ ಪುಷ್ಪವತಿ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post