ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಇತ್ತೀಚೆಗೆ ಸಂವಹನ ತಂತ್ರಜ್ಞಾನದಲ್ಲಿ ವ್ಯಾಪಕವಾದ ಅಭಿವೃದ್ಧಿಗಳಾಗುತ್ತಿವೆ. ಅವುಗಳನ್ನು ಪತ್ರಿಕೋದ್ಯಮದಲ್ಲೂ ಸೂಕ್ತವಾಗಿ ಬಳಸಿಕೊಳ್ಳುವ ಅವಕಾಶವಿದ್ದು, ಪತ್ರಕರ್ತರು ತಂತ್ರಜ್ಞಾನದ ಜೊತೆ ಜೊತೆಗೆ ಪತ್ರಿಕೋದ್ಯಮದ #Journalism ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಮತ್ತು ಸಂಪಾದಕ ರವಿ ಎಸ್. ಗೌಡ ಅವರು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ #KuvempuUniversity ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ಸುದ್ದಿವಾಹಿನಿಯಲ್ಲಿ ಇನ್‌ಪುಟ್ ನಿಂದ ಔಟ್‌ಪುಟ್ ಪ್ರಕ್ರಿಯೆ’ಯ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಿಕೋದ್ಯಮದ ವಿದ್ಯಾರ್ಥಿಗಳು ವೃತ್ತಿರಂಗಕ್ಕೆ ಇಳಿಯುವ ಮೊದಲೇ ಸುದ್ದಿಸಂಸ್ಥೆಗಳ ರಚನೆಯ ಬಗ್ಗೆ ತಿಳಿದುಕೊಂಡಿರಬೇಕು.
ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನಿಕ ಜ್ಞಾನಕ್ಕೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದೆ. ಬರವಣಿಗೆಗೆ ಲೇಖನಿ, ಕಾಗದದ ಅನಿವಾರ್ಯತೆ ಮಾಯವಾಗಿದೆ.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್ ಸತ್ಯಪ್ರಕಾಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಡಾ. ಸತೀಶ್‌ಕುಮಾರ್, ಡಾ. ವರ್ಗೀಸ್, ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷೆ ವಿದ್ಯಾ, ಕಾರ್ಯದರ್ಶಿ ಶರತ್, ಹಿರಿಯ ವರದಿಗಾರ ಜೇಸುದಾಸ್ ಹಾಗೂ ನಿತಿನ್ ಕೈದೋಟ್ಲು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post