ಕಲ್ಪ ಮೀಡಿಯಾ ಹೌಸ್ | ಯಡಕುಮಾರಿ |
ಭಾರೀ ಮಳೆಯಿಂದಾಗಿ ಭೂ ಕುಸಿತಗೊಂಡು ರೈಲು ಸಂಚಾರ ಸ್ಥಗಿತಗೊಂಡಿದ್ದ ಪ್ರದೇಶದಲ್ಲಿ ಮಣ್ಣನ್ನು ರೈಲ್ವೆ ಇಲಾಖೆ ತೆರವುಗೊಳಿಸಿದ್ದು, ಕೆಲವು ವಿಭಾಗಗಳು ಸರಿಯಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಕಡಗರವಳ್ಳಿ-ಡೋಣಿಗಲ್, ಯೆಡಕುಮಾರಿ-ಕಡಗರವಳ್ಳಿ ಮತ್ತು ಶ್ರೀಬಾಗಿಲು-ಯಡಕುಮಾರಿ ವಿಭಾಗಗಳಲ್ಲಿ ಸಾಮಾನ್ಯ ರೈಲು ಸೇವೆಗಳನ್ನು ಪುನಃಸ್ಥಾಪಿಸಲು ವಿಭಾಗೀಯ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಿದ್ದಾರೆ. ನಿರಂತರ ಪ್ರಯತ್ನಗಳೊಂದಿಗೆ, ಹಳಿಯನ್ನು ಪರೀಕ್ಷಿಸಲಾಗಿದೆ ಮತ್ತು ಕಾರ್ಯಾಚರಣೆಗೆ ಸೂಕ್ತವೆಂದು ಪ್ರಮಾಣೀಕರಿಸಲಾಗಿದೆ ಎಂದು ತಿಳಿಸಿದೆ.
ಈ ಪ್ರಯತ್ನಗಳೊಂದಿಗೆ, ಸಾಮಾನ್ಯ ರೈಲು ಸೇವೆಗಳು ಪುನರಾರಂಭಗೊಂಡಿದ್ದು, ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಪ್ರಯಾಣವನ್ನು ಖಚಿತಪಸಿದೆ.
ಎಲ್ಲೆಲ್ಲಿ ಪುನಃಸ್ಥಾಪನೆ?
- ಕಡಗರವಳ್ಳಿ-ಡೋಣಿಗಲ್ ವಿಭಾಗ: ಇಂದು ಬೆಳಿಗ್ಗೆ 05:10 ಕ್ಕೆ ಸರಿಹೊಂದಿದೆ.
- ಯೆಡಕುಮಾರಿ-ಕಡಗರವಳ್ಳಿ ವಿಭಾಗ: ಇಂದು ಬೆಳಿಗ್ಗೆ 06:30 ಕ್ಕೆ ಸರಿಹೊಂದಿದೆ.
- ಶ್ರೀಬಾಗಿಲು-ಯಡಕುಮಾರಿ ವಿಭಾಗ: ಇಂದು ಸರಿಹೊಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post