ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಜಂಬೆ ಗ್ರಾಮದ ಮನೆಯ ಗಿಡದಲ್ಲಿ ಅಡಗಿದ್ದ ಕಾಳಿಂಗ ಸರ್ಪ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ವಿಠಲ ಪೂಜಾರಿ ಎಂಬುವವರ ಮನೆಯ ಸಮೀಪದ ಹೂವಿನ ಗಿಡದ ಮೇಲೆ ಮಲಗಿದ್ದ ಸುಮಾರು 10-11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಬೆಳ್ಳೂರು ನಾಗರಾಜ್ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸೋಮವಾರ ಸೆರೆ ಹಿಡಿದು ಸಮೀಪದ ಕಾಡಿಗೆ ಬಿಡಲಾಯಿತು.
ಇದೇ ಸಮಯದಲ್ಲಿ ಕಾಳಿಂಗ ಸರ್ಪಗಳ ಜೀವನ ಶೈಲಿ, ಹಾವು ಹಾಗೂ ಮಾನವ ಸಂಘರ್ಷ ನಿವಾರಣೆ, ಹಾವಿನ ಕಡಿತಗಳ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಲಾಯಿತು.
ಆಹಾರವನ್ನು ಅರಸಿ ಮನೆ ಹಾಗೂ ತೋಟಗಳ ಬಳಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪಗಳು ಮಲೆನಾಡಿನಲ್ಲಿ ಇತ್ತೀಚಿಗೆ ದಿನೆ ದಿನೆ ವರದಿಯಾಗುತ್ತಿವೆ.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ವಲಯದ ಅರಣ್ಯಾಧಿಕಾರಿಗಳು ನಾಗರಾಜ್ ಅವರ ಜೊತೆಯಲ್ಲಿದ್ದರು.
ಮಾಹಿತಿ: ಮಹೇಶ ಹಿಂಡ್ಲೆಮನೆ
Discussion about this post