ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಸೋಂಕು ತಡೆಗಟ್ಟಲು ರಾಜ್ಯದಲ್ಲಿ ಹೇರಲಾಗಿರುವ ನಿಬಂರ್ಧವನ್ನು ಜನರು ಪಾಲಿಸಬೇಕು. ಇದನ್ನು ಯಾರಾದರೂ ಉಲ್ಲಂಘಿಸಿ ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ದೂಷಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಹೇರಿರುವ ಮುಖ್ಯಮಂತ್ರಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಯುಗಾದಿ ಹಬ್ಬದ ಖರೀದಿಗಾಗಿ ಯಾರೂ ಮಾರುಕಟ್ಟೆಗೆ ಹೋಗಬೇಡಿ. ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸಿ. ಮಾರ್ಚ್ 31ರವರೆಗೂ ಮನೆಯಿಂದ ಹೊರಕ್ಕೆ ಬರಬೇಡಿ. ತುರ್ತು ಅಗತ್ಯವಿದ್ದರೆ ಮಾತ್ರ ಬನ್ನಿ ಎಂದಿದ್ದಾರೆ.
Also Read
ಸರ್ಕಾರದ ಆದೇಶ ಉಲ್ಲಂಘಿಸಿ ಸುಖಾಸುಮ್ಮನೆ ರಸ್ತೆಯಲ್ಲಿ ಸುತ್ತಾಡಿದರೆ ಕ್ರಿಮಿನಲ್ ಕೇಸ್ ಗ್ಯಾರೆಂಟಿ
ಸರ್ಕಾರದ ತುರ್ತು ಆದೇಶವನ್ನು ಉಲ್ಲಂಘಿಸಿ ಜನರು ಮನೆಯಿಂದ ಅನಾವಶ್ಯಕವಾಗಿ ಹೊರಕ್ಕೆ ಬಂದರೆ ಕ್ರಮ ಕೈಗೊಳ್ಳುವುದು ಪೊಲೀಸರಿಗೆ ಅನಿವಾರ್ಯವಾಗುತ್ತದೆ. ಹಾಗೆ ಕ್ರಮ ಕೈಗೊಂಡರೆ ನನ್ನನ್ನು ದೂಷಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
Get in Touch With Us info@kalpa.news Whatsapp: 9481252093







Discussion about this post