ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಮಾಸ್ಕ್ ಹಾಕಿಕೊಳ್ಳದೆ ತಿರುಗಾಡುತ್ತಿದ್ದವರನ್ನೂ ಬೆತ್ತದಿಂದ ದಂಡಿಸಿದ್ದು ಆಯಿತು, ಬಸ್ಕಿ ಹೊಡಿಸಿದ್ದು ಆಯಿತು, ಕ್ಲೀನ್ ಮಾಡಿಸಿದ್ದು ಆಯಿತು. ಆದರೂ ಜನ ಕೇಳುತ್ತಿಲ್ಲ. ಈಗ ಕೊನೆಗೆ ವಿಧಿಯಿಲ್ಲದೇ ಪೊಲೀಸರು ಕೈ ಮುಗಿದು ಮಾಸ್ಕ್ ಹಾಕಿಕೊಳ್ಳಿ ಎಂದು ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಜ. ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿ ಯಾರು ಮನೆಯಿಂದ ಹೊರ ಬಂದಿರಲಿಲ್ಲ. ಮೇ 3 ರಿಂದ ಲಾಕ್ ಡೌನ್ ಸಡಿಲಿಕೆ ಆಗಿದ್ದೇ ತಡ, ಜನ ಕೊರೋನಾಗೂ ಹೆದರದೆ ನಗರದಲ್ಲಿ ಸಂಚರಿಸುತ್ತಿದ್ದಾರೆ. ಇತ್ತ ಪೋಲೀಸ್ ಅಧಿಕಾರಿಗಳು ಸಾರ್ವಜನಿಕರ ಯೋಗ ಕ್ಷೇಮಕ್ಕಾರ ಮಾಸ್ಕ್ ಧರಿಸಿ, ಕಾರಣವಿಲ್ಲದೆ ತಿರುಗಾಡಬೇಡಿ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಇದಾವುದಕ್ಕೇ ಕ್ಯಾರೆ ಎನ್ನದ ಜನ ಮಾಸ್ಕ್ ಸಹ ಬಳಸದೆ ಓಡಾಡುತ್ತಿದ್ದಾರೆ.
ಇದರಿಂದಾಗಿ ಪೋಲೀಸ್ ಅಧಿಕಾರಿಗಳು ರಸ್ತೆಯಲ್ಲೆ ನಿಂತು ಮಾಸ್ಕ್ ಹಾಕಿಕೊಳ್ಳಿ ಎಂದು ಬೆತ್ತದ ರುಚಿ ತೋರಿಸಿದರು, ಪ್ರಕರಣ ದಾಖಲಿಸಿದ್ದು ಆಯಿತು, ಬಸ್ಕಿ ಹೊಡೆಸಿದ್ದು ಆಯಿತು. ಕೊನೆಗೆ ಕೈಮುಗಿದು ಮಾಸ್ಕ್ ಹಾಕಿಕೊಳ್ಳಿ ಎಂದು ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ. . ಚಳ್ಳಕೆರೆ ನಗರದ ರಸ್ತೆಗಳಲ್ಲಿ ಅನಾವಶ್ಯಕವಾಗಿ ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದವರನ್ನು ವೃತ್ತ ನಿರೀಕ್ಷಕ ಈ. ಆನಂದ ನಿಲ್ಲಿಸಿ, ಕೈ ಮುಗಿದು ಮಾಸ್ಕ್ ಹಾಕಿ ಕೊಂಡು ಕೊರೋನಾ ವೈರಸ್ ಮಾರಿಯಿಂದ ಪ್ರಾಣ ಉಳಿಸಿಕೊಳ್ಳಿ ಎಂದು ವಿನೂತನವಾಗಿ ಅರಿವು ಮೂಡಿಸುತ್ತಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093














