ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೊರೋನಾ ವೈರಸ್ ಹರಡುತ್ತಿದೆ. ತೀವ್ರತೆ ಸ್ವರೂಪ ಪಡೆದಿದ್ದು ಯಾರಿಂದ-ಯಾರಿಗೆ-ಯಾವಾಗ ಹರಡುತ್ತದೆ ಎನ್ನುವುದೇ ತಿಳಿಯದಂತಾಗಿದೆ. ಆದುದರಿಂದ ಆಟೋ, ಕಾರು, ಮತ್ತು ಲಘುವಾಹನ ಚಾಲಕರು ಎಚ್ಚರಿಕೆಯಿಂದ ಇರಬೇಕು ಎಂದು ಡಿವೈಎಸ್ಪಿ ಶ್ರೀಧರ್ ಮಾಲೀಕರಿಗೆ ಸಲಹೆ ನೀಡಿದರು.
ಪೋಲಿಸ್ ಮುಖ್ಯ ಅಧೀಕ್ಷಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಆಟೋ, ಕಾರು, ಮತ್ತು ಲಘು ವಾಹನ ಮಾಲೀಕ ಮತ್ತು ಚಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಇಂದಿನಿಂದ ನಗರದಲ್ಲಿ ಅನಾವಶ್ಯಕವಾಗಿ ಆಟೋ ಅಥವಾ ಕಾರು ಚಲಾಯಿಸುವರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬ ಆಟೋ ಮತ್ತು ಕಾರು ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಟೋ ಆಥಾವಾ ಕಾರಿನಲ್ಲಿ ಪ್ರಯಾಣಿಕರನ್ನು ಕೂರಿಸುಕೊಳ್ಳುವಾಗ ಪ್ರಯಾಣದ ವಿವರ ಪಡೆದುಕೊಂಡು ಆಟೋ ಹತ್ತಿಸಿಕೊಳ್ಳಬೇಕು. ಹಣದ ಆಸೆಗೆ ವಿವರ ತಿಳಿಯದೆ ಹತ್ತಿಸಿಕೊಂಡಾಗ ಆಗುವ ಅನಾಹುತೆ ಬೇರೆ. ಆಟೋ ಆಥವಾ ಕಾರು ಹತ್ತುವ ಪ್ರಯಾಣಿಕ ಕಡ್ಡಾಯವಾಗಿ ಮಾಸ್ಕ್ ಇದ್ದಾಗ ಮಾತ್ರ ಅವಕಾಶ ಮಾಡಿಕೊಡಬೇಕು. ಸಾಧ್ಯವಾದರೆ ಪ್ರತಿದಿನ ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ಪ್ರಯಾಣ ಮಾಡುವಾಗ ಅಂತರ ಕಾಯ್ದು ಕೊಳ್ಳಬೇಕು. ಯಾವ ವ್ಯಕ್ತಿ ಹತ್ತಿರದಿಂದ ಮಾತನಾಡಿಸೋಕೆ ಹತ್ತಿರ ಬಂದಾಗ ದೂರದಿಂದಲೇ ಮಾತನಾಡಬೇಕು, ನಿಮ್ಮ ಜಾಗೃತಿ ನಿಮ್ಮ ಆರೋಗ್ಯ ಎಂದರು.
ಪಿಎಸ್‌ಐ ರಾಘವೇಂದ್ರ ಮಾತನಾಡಿ, ಇಂದಿನಿಂದ ಬೆಳಗ್ಗೆ 5 ರಿಂದ ಸಂಜೆ 8 ರವರಗೆ ಮಾತ್ರ ಆಟೋ ರೋಡಿಗಿಳಿಯಬೇಕು. ಸಮಯ ಮೀರಿ ವಾಹನ ಚಲಾಯಿಸಿದ್ದೆಯಾದರೆ ಅಂತಹವರ ವಿರುದ್ದ ಕೇಸ್ ದಾಖಲಿಸಲಾಗುವುದು. ಹೆಚ್ಚಿಗೆ ಹಣದ ಆಸೆಗೆ ವಾಹನದಲ್ಲಿ ಜಾಸ್ತಿ ಪ್ರಯಾಣಿಕರನ್ನು, ತುಂಬಿಸಿಕೊಳ್ಳವುದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಬಸ್ ನಿಲ್ದಾಣದಲ್ಲಿ, ಆಸ್ಪತ್ರೆ ಮುಂಭಾಗದಲ್ಲಿ ಆಟೋಕ್ಕಾಗಿ ಕಾಯುವವರನ್ನು ಎಲ್ಲಿಂದ, ಯಾಕೆ ಬಂದಿದ್ದೀರಿ ಎಂಬುದನ್ನು ತಿಳಿದು ಹತ್ತಿಸಿಕೊಳ್ಳಬೇಕು ಎಂದರು.
ಪಿಎಸ್‌ಐ ಮಂಜುನಾಥ್, ಲಿಂಗಾರೆಡ್ಡಿ, ಪ್ರೊಬೆಷನರಿ ಪಿಎಸ್‌ಐ ರಮೇಶ್ ಎಸ್.ಪಿ. ಪೇದೆ ಏಕಾಂತ ರೆಡ್ಡಿ, ಲಿಂಗರಾಜ್, ಮಹಂತೇಶ್, ಕಾರು, ಆಟೋ, ಲಘುವಾಹನ ಮಾಲೀಕರು, ಚಾಲಕರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post