ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತ ಎಂದಿಗೂ ಸರ್ವೇ ಜನಃ ಸುಖಿನೋಭವಂತು ಅಥವಾ ವಸುದೈವ ಕುಟುಂಬಕಮ್ ಎಂಬ ತಳಹದಿಯ ಮೇಲೆ ಜೀವನ ಶೈಲಿ ರೂಢಿಸಿಕೊಂಡು ಹಿಂದಿನ ಅಥವಾ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಒಂದು ಪದ್ದತಿ ಅಥವಾ ತಪಸ್ಸಿನಂತೆ ನಡೆದುಕೊಂಡು ಬಂತು. ಅದನ್ನು ಕೆಲವರು ‘ಮಡಿ’ ಅಂತಲೋ ಅಥವಾ ಆಚರಣೆ ಅಂತಲೋ ಅಥವಾ ಇತರರನ್ನು ನಮ್ಮೊಂದಿಗೆ ಸೇರಿಸಿಕೊಳ್ಳಲ್ಲ ಅಂತಲೋ ಅಥವಾ ಜಾತಿ ವ್ಯವಸ್ಥೆ ಅಂತಲೋ ಹಲವರು ಅವಮಾನಿಸಿದರು. ಅಂದು ಅಪ್ರಸ್ತುತ ಅಂದಿದ್ದವರು ಇಂದು ಅದನ್ನು ಅನುಸರಿಸುವುದು ಅನಿವಾರ್ಯ ಆಗಿ ಹೋಗಿದೆ.
ಅಂದಿನ ಕಾಲದಲ್ಲಿ ಒಂದೊಂದು ಜಾತಿಯಲ್ಲಿ ಒಂದೊಂದು ಬಗೆಯ ಪದ್ಧತಿಗಳು ಆಚರಣೆಗಳಿದ್ದವು.
ಎಲ್ಲಿಗಾದರು ಹೊರಗೆ ಹೋಗಿ ಬಂದರೆ ಅಥವಾ ಯಾರಾದರು ಬಂದರೆ ಮನೆಯನ್ನು ಪ್ರವೇಶಿಸುವಾಗ ಕೈಕಾಲುಗಳನ್ನು ತೊಳೆದು ಪ್ರವೇಶಿಸಬೇಕಿತ್ತು. ಯಾರಾದರೂ ಪೇಟೆಯಿಂದ ಬಂದರೆ ಮೊದಲು ತಾವು ಧರಿಸಿದ ಬಟ್ಟೆಯನ್ನು ಒಂದು ಜಾಗದಲ್ಲಿಡಬೇಕಿತ್ತು.
ಹೆಣವನ್ನು ಸುಡಲು ಹೋದರೆ ಇನ್ನೊಬ್ಬರನ್ನು ಮುಟ್ಟುವ ಮುಂಚೆ ಸ್ನಾನ ಮಾಡಬೇಕಿತ್ತು.
ಮಲ ಮೂತ್ರ ವಿಸರ್ಜನೆ ಮಾಡಿದರೆ ಹಿಂದಿನ ಕಾಲದಲ್ಲಿ ಮಣ್ಣಿನಲ್ಲಿ ಕೈತೊಳೆಯುತ್ತಿದ್ದರು.
ಇವೆಲ್ಲ ಪದ್ದತಿ ಅಥವಾ ಆಚರಣೆ ವ್ಯಕ್ತಿಯ ಬಟ್ಟೆ ಅಥವಾ ಅವನು ಧರಿಸಿದ ವಸ್ತುವಿಗೆ ಯಾವುದೇ ಕ್ರಿಮಿ ಕೀಟಗಳು ತಗುಲಿದರು ಅದು ಶುದ್ಧವಾಗಲಿ ಎಂಬುದೇ ಹೊರತು ಇನ್ನಾವುದೇ ಕಾರಣಗಳಿಂದಾಗಿ ಅಲ್ಲವಾಗಿತ್ತು.
ಹಿಂದಿನ ಕಾಲದಲ್ಲಿ ಹೋಮ ಹವನ ಇತ್ಯಾದಿಗಳು ಮಾಡುವುದು ಹೋಮಕ್ಕೆ ಹಾಕುವ ಸಲಕರಣೆಗಳಿಂದ ಅದು ಪ್ರಕೃತಿ ಸೇರಿ ಪ್ರಕೃತಿಗಳಲ್ಲಿ ಇರುವ virusಗಳನ್ನು ಹೊಡೆದೋಡಿಸುತ್ತಿತ್ತು.
ಹಳ್ಳಿ ಮನೆಗಳಲ್ಲಿ ಕಟ್ಟಿಗೆಯ ಒಲೆಗಳನ್ನು ಉಪಯೋಗಿಸುವುದರಿಂದ ಅದರಿಂದ ಉತ್ಪತ್ತಿಯಾಗುವ ಹೊಗೆ antibiotics ಆಗಿ ಇಡಿಯ ಕುಟುಂಬವನ್ನು ರಕ್ಷಿಸುತ್ತಿತ್ತು.
ಕೆಲವು ಸಸ್ಯಾಹಾರ ಪದಾರ್ಥಗಳು(ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಅರಿಶಿನ ಇತ್ಯಾದಿ) ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮನುಷ್ಯನಿಗೆ ಯಾವುದೇ ರೋಗ ಬರದಂತೆ ತಡೆಯಲು ಸಹಕಾರಿ ಆಗುತ್ತಿತ್ತು.
ಇಂದಿನ ಆಧುನಿಕ fast food ಗಳ ಯುಗದಲ್ಲಿ ಇದೆಲ್ಲವೂ ಕಲಬೆರಿಕೆ ಆಗಿ ನಮಗೆ ಅದರ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಮರ ಗಿಡಗಳು ಹೆಚ್ಚಾಗಿರುವುದರಿಂದ ಸಕಾಲಕ್ಕೆ ಮಳೆಯಾಗಿ ಬೆಳೆಗಳು ಬರುತ್ತಿದ್ದವು. ಆದರೆ ಇಂದು ಮರಕಡಿದು ಬೃಹದಾಕಾರದ ಕಟ್ಟಡ ನಿರ್ಮಿಸಿ ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ತಲುಪಿದ್ದೇವೆ.
ಮಾನವ ಎಷ್ಟೇ ಮುಂದುವರಿದರೂ ಪ್ರಕೃತಿ ತನ್ನ ಚಾಣಾಕ್ಷ ಬುದ್ಧಿಯಿಂದ ಸಮತೋಲನ ಕಾಪಾಡಿಕೊಂಡು ಹೋಗುತ್ತದೆ.
ಹಿಂದಿನ ಕಾಲದವರು ಒಂದು ಮಾರ್ಗವನ್ನು ಹಾಕಿ ಕೊಟ್ಟಿದ್ದರು. ಅದನ್ನು ಬಿಟ್ಟು ಇಂದಿನ ತಲೆಮಾರಿನ ಮಾನವರು ತನ್ನದೇ ಹೊಸದಾರಿ ಮಾಡಿಕೊಂಡು ಆ ಲೋಕದಲ್ಲಿ ಕಳೆದುಹೋಗಿದ್ದಾನೆ. ಹಿಂದಿನವರ ಆಚರಣೆ, ಮಡಿವಂತಿಕೆ, ವಿಚಾರಗಳು, ಸಂಪ್ರದಾಯ, ಆಹಾರ ಪದ್ಧತಿ ಎಲ್ಲವೂ ಒಂದು ರೀತಿಯಲ್ಲಿ ಮನುಷ್ಯನ ಒಳ್ಳೆಯದಕ್ಕೆ ಆಗಿತ್ತು ಎನ್ನುವುದು ಇಂದು ಮರೆತುಹೋಗಿದ್ದೇವೆ.
ಇಂದು ಕೆಲವೊಂದಿಷ್ಟು ಆಚರಣೆಗಳು ಪ್ರಸ್ತುತ ಇದ್ದರೂ ಸಹ ಅದನ್ನು ಮೂಢನಂಬಿಕೆ ಅಥವಾ ಮೌಢ್ಯತೆ ಎಂದು ತಮ್ಮ ವಯಕ್ತಿಕ ಪ್ರಚಾರಕ್ಕೆ ಆಚರಣೆಗಳ ದಾಳವಾಗಿ ಸಿಕ್ಕಿಕೊಂಡಿವೆ.
ಎಷ್ಟೇ ಮುಂದುವರಿದರೂ ನಮ್ಮ ಜೀವನ ನಾವೇ ನಡೆಸಿಕೊಂಡು ಹೋಗಬೇಕೆ ಹೊರತು ಇನ್ನಾರು ಅಲ್ಲ. ಹಿಂದಿನವರು ಮಾಡಿಕೊಟ್ಟ ಸಂಸ್ಕೃತಿಯನ್ನು ಮರೆತಿದ್ದಕ್ಕೆ ಇಂದು ನಾವು ಅನುಭವಿಸುತ್ತಿರುವ ಸಮಸ್ಯೆಗೆ ಕಾರಣವೂ ಆಗಿರಬಹುದು.
ಆದರೂ ಇಂದು ಆಯುರ್ವೇದ ವೈದ್ಯಕೀಯ ಪದ್ದತಿ ನಶಿಸಿಹೋಗುವ ಅಥವಾ ಅದನ್ನು ಇಂದಿನ ಮನಃಸ್ಥಿತಿಯವರು ಒಪ್ಪಿಕೊಳ್ಳದೆ ಞಛಿಜ್ಚಿಜ್ಞಿಛಿ ಗಳ ಮಾರಾಟ ಮಾಡಿ ಹಣಗಳಿಸುವ ಒಳ್ಳೆಯ ತಂತ್ರಗಾರಿಕೆಯನ್ನು ರೂಢಿಸಿಕೊಂಡಿದ್ದಾರೆ. ಆದರೆ ಆಯುರ್ವೇದದಲ್ಲಿ ಎಲ್ಲದಕ್ಕೂ ಔಷಧ ಇದೆ ಆದರೆ ಅದನ್ನು ಒಪ್ಪಿಕೊಳ್ಳಲು ಇಂದಿನ ವಿಜ್ಞಾನ ತನ್ನ ಅತಿಯಾದ ಬುದ್ಧಿವಂತಿಕೆ ಬಿಡುತ್ತಿಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ಸತ್ಯ.
Get in Touch With Us info@kalpa.news Whatsapp: 9481252093
Discussion about this post