ಕಲ್ಪ ಮೀಡಿಯಾ ಹೌಸ್ | ಲಿಂಗನಮಕ್ಕಿ |
ಶರಾವತಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು, ನೀರು ಹೊರಬಿಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚಿಸಲಾಗಿದೆ.
1819 ಅಡಿಗಳ ಗರಿಷ್ಟ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಇಂದು ಮುಂಜಾನೆ 8 ಗಂಟೆ ವೇಳೆಗೆ 1801.35 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಸುಮಾರು 30,000 ಕ್ಯೂಸೆಕ್ಸ್ ಒಳ ಹರಿವಿದ್ದು, ಮಳೆ ಹೀಗೆ ಮುಂದುವರೆದರೆ ಅತಿ ಶೀಘ್ರದಲ್ಲೇ ಗರಿಷ್ಟ ಮಟ್ಟ ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಯಾವುದೇ ಸಮಯದಲ್ಲಿ ನೀರು ಹೊರಬಿಡಬಹುದು. ಹೀಗಾಗಿ ನದಿ ಪಾತ್ರದ ಜನರು ಹಾಗೂ ಕೆರೆ ದಂಡೆ ಬದಿಯಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಯಾವುದೇ ಜನರು, ತಮ್ಮ ಜಾನುವಾರುಗಳನ್ನು ನೀರಿಗೆ ಇಳಿಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
Also read: ಕೊಡಗಿನಲ್ಲಿ ರಕ್ಕಸ ಮಳೆಯ ಆರ್ಭಟ: ಕೊಚ್ಚಿ ಹೋದ ಬೆಟ್ಟ, ಕುಸಿದ ರಸ್ತೆಗಳು, ಬೆಚ್ಚಿದ ಜನತೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post