ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆ ಸಂಸತ್‌ನಲ್ಲಿ ನಡೆಯುತ್ತಿದ್ದು, ಈ ಕುರಿತಂತೆ ನಿಗದಿಯಾಗಿರುವ ಸಮಯದಂತೆ ಎಲ್ಲ ಪಕ್ಷಗಳ ಸಂಸದರು ಮಾತನಾಡುತ್ತಿದ್ದಾರೆ. ಸಂಜೆ 6 ಗಂಟೆಗೆ ಮತದಾನದ ಸಮಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ನಿಗದಿ ಮಾಡಿದ್ದಾರೆ.
12.40: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳುತ್ತಾರೆ: ದೇಶದ ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕು ಈ ದೇಶದಲ್ಲಿ ಅಲ್ಪಸಂಖ್ಯಾತರದ್ದು. ಆದರೆ, ಪ್ರಧಾನಿ ಮೋದಿ ಹೇಳುತ್ತಾರೆ, ಈ ದೇಶದ ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕು ಬಡವರದ್ದು ಎಂದು: ಬಿಜೆಪಿ ಎಂಪಿ ರಾಕೇಶ್ ಸಿಂಗ್
12.35: ಅವಿಶ್ವಾಸ ನಿರ್ಣಯ ಮಂಡನೆ ಕಾಂಗ್ರೆಸ್ ಹಾಗೂ ಡಿಎಂಕೆಯ ಮುಂಚೂಣಿತ್ವದಲ್ಲೇ ನಡೆಯುತ್ತಿದೆ. ಹೀಗಾಗಿ, ನಾವು ಇದನ್ನು ಬೆಂಬಲಿಸುವುದಿಲ್ಲ: ಎಐಎಡಿಎಂಕೆ ಸಂಸದ ಮೈತ್ರಿಯನ್
12.30: ರಾಹುಲ್‌ಗಾಂಧಿ ತಡವರಿಸದೇ 15 ನಿಮಿಷ ಮಾತನಾಡಿದರೆ ಭೂಮಿ ನಡುಗುವುದಲ್ಲ, ನೃತ್ಯವನ್ನೂ ಸಹ ಮಾಡುವುದಿಲ್ಲ: ಬಿಜೆಪಿ ನಾಯಕ ಪರೇಶ್ ರಾವಲ್ ವ್ಯಂಗ್ಯ
Agar aaj Rahul ji bina padhe, bina fumble kare, bina ghalti kare 15 minute bolenge toh dharti zaroor hilegi, hilegi bhi kya, naachegi: Paresh Rawal,BJP MP #NoConfidenceMotion pic.twitter.com/EwGCtOlxRe
— ANI (@ANI) July 20, 2018
12.15: ಲೋಕಸಭಾ ಕಲಾಪ ಬಹಿಷ್ಕರಿಸಿ ಹೊರನಡೆದ ಶಿವಸೇನೆ ಸಂಸದರು
12.00: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಭರವಸೆಗಳನ್ನು ನೀಡಿ ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ: ಟಿಡಿಪಿ
11.55: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪಾಳೆಯ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ಆರಂಭವಾಗಿದ್ದು, ಸಂಜೆ 6ಗಂಟೆ ಮತದಾನ ಪ್ರಕ್ರಿಯೆ: ಸ್ಪೀಕರ್ ಸುಮಿತ್ರಾ ಮಹಾಜನ್
This is what it looks like… #BhookampAaneWalaHai pic.twitter.com/Lm8nIg6a7A
— Amit Malviya (@amitmalviya) July 20, 2018
11.42: ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆಯೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರ ಟ್ವೀಟ್ ಹೀಗಿದೆ ನೋಡಿ:
TDP blames Congress for the unscientific & irrational bifurcation of Andhra Pradesh!
No Confidence motion will surely project the crevices within the yet not formed “Mahagatbandhan”महागठबंधन में #BhookampAaneWalaHai
— Sambit Patra (@sambitswaraj) July 20, 2018
11.33: ಆಂಧ್ರಪ್ರದೇಶ ವಿಭಜನೆಯ ವೇಳೆ ಮಾತ್ರ ಮಹತ್ವ ಪಡೆದಿತ್ತು. ಆದರೆ, ಆನಂತರ ನಿರ್ಲಕ್ಷಕ್ಕೆ ಒಳಗಾಗಿದೆ: ಟಿಡಿಪಿ ಎಂಪಿ ಜಯದೇವ ಗಲ್ಲಾ ಆರೋಪ
11.32: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಡಿಶಾವನ್ನು ನಿರ್ಲಕ್ಷ ಮಾಡಿವೆ: ಬಿಜೆಪಿ ಎಂಪಿ ಭತ್ರುಹರಿ ಮಹ್ತಾಬ್ ಆಕ್ರೋಶ, ಸಭಾತ್ಯಾಗ
11.30: ಚರ್ಚೆಗೆ ಪಕ್ಷಗಳಿಗೆ ಸಮಯ ನಿಗದಿ: ಕಾಂಗ್ರೆಸ್‌ಗೆ ನೀಡಿರುವ ಸಮಯದ ಕುರಿತಾಗಿ ಅಸಮಾಧಾನ ಹೊರ ಹಾಕಿದ ಮುಖಂಡರು
11.22 : ಟಿಡಿಪಿ ಹೇಳಿರುವ ಅನ್ವಯಿಸುವ ಕಾರಣಗಳು ಹೀಗಿವೆ:
1. ನ್ಯಾಯೋಚಿತತೆಯ ಕೊರತೆ
2. ನಂಬಿಕೆಯ ಕೊರತೆ
3. ಆದ್ಯತೆಯ ಕೊರತೆ
4. ನಿಷ್ಪಕ್ಷಪಾತ ನಂಬಿಕೆಯ ಕೊರತೆ
11.21: ಟಿಡಿಪಿ ಸಂಸದ ಜೇಯಬ್ ಬಲ್ಲ ಅವರಿಂದ ಅವಿಶ್ವಾಸ ನಿರ್ಣಯ
11.21: ಅವಿಶ್ವಾಸ ನಿರ್ಣಯ ವಿರೋಧಿಸಿ ಬಿಜೆಪಿಯ ಹಲವು ಸಂಸದರು ಸಭಾತ್ಯಾಗ
11.20: ಅವಿಶ್ವಾಸ ನಿರ್ಣಯ: ಕಲಾಪ ಆರಂಭಿಸುವಂತೆ ಸೂಚಿಸಿದ ಸ್ಪೀಕರ್ ಸುಮಿತ್ರ ಮಹಾಜನ್
11.00: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆ ಸಂಸತ್‌ನಲ್ಲಿ ಆರಂಭವಾಗಿದೆ.
10.30: ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತನಾಡಲು 3 ಗಂಟೆ 33 ನಿಮಿಷಗಳ ಕಾಲ ಸಮಯವನ್ನು ನಿಗದಿ ಮಾಡಿದ್ದು, ಕಾಂಗ್ರೆಸ್‌ಗೆ 38 ನಿಮಿಷ ನೀಡಲಾಗಿದೆ.
ಇನ್ನು, ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ 27 ನಿಮಿಷ, ತಮಿಳುನಾಡಿನ ಎಐಎಡಿಎಂಕೆಗೆ 29 ನಿಮಿಷ, ಒಡಿಶಾದ ಬಿಜೆಡಿಗೆ 15 ನಿಮಿಷ, ಶಿವಸೇನೆಗೆ 14 ನಿಮಿಷ, ಟಿಡಿಪಿಗೆ 13 ನಿಮಿಷ, ಟಿಆರ್‌ಎಸ್‌ಗೆ 9 ನಿಮಿಷ, ಸಿಪಿಐಎಂಗೆ 7 ನಿಮಿಷ, ಸಮಾಜವಾದಿ ಪಕ್ಷಕ್ಕೆ 6 ನಿಮಿಷ, ಎನ್‌ಸಿಪಿಗೆ 6 ನಿಮಿಷ ಹಾಗೂ ಎಲ್‌ಜೆಎಸ್‌ಪಿಗೆ 5 ನಿಮಿಷ ಕಾಲಾವಕಾಶವನ್ನು ನಿಗದಿಗೊಳಿಸಲಾಗಿದೆ.
Discussion about this post