ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಇಲ್ಲಿನ ವೀರಾಪುರದಲ್ಲಿ ಟೈರ್ ತುಂಬಿಕೊಂಡಿದ್ದ ಲಾರಿಯೊಂದು ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಟೈರ್ ತುಂಬಿಕೊಂಡು ಆಲೆಮನೆಯೊಂದಕ್ಕೆ ತೆರಳುತ್ತಿದ್ದ ಲಾರಿಗೆ ಎಲೆಕ್ಟ್ರಿಕ್ ಕಂಬದಿಂದ ವೈರ್ ತಗುಲಿ ಲಾರಿಯ ಟಾರ್ಪಲ್’ಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಲಾರಿಗೆ ವ್ಯಾಪಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತತಕ್ಷಣವೇ ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಲಾರಿಯಲ್ಲಿದ್ದ ಟೈರ್‌ಗಳು ಸುಟ್ಟು ಹೋಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post