ಕಲ್ಪ ಮೀಡಿಯಾ ಹೌಸ್ | ಲಕ್ನೋ |
ತೀವ್ರವಾಗಿ ಗಾಯಗೊಂಡ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ, ಸಹಾಯ ಮಾಡುವುದರ ಬದಲಾಗಿ ಅನೇಕರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆಹಿಡಿಯುವುದರ ಮೂಲಕ ಅಮಾನವೀಯತೆ ಮೆರೆದಿರುವ ಘಟನೆ ಉತ್ತರ ಪ್ರದೇಶದ ಕನೌಜ್‍ನಲ್ಲಿ ನಡೆದಿದೆ.
वीडियो कन्नौज के गुरसहायगंज से है। रविवार को पीडब्ल्यूडी के डाक बंगले में 10 साल की एक बच्ची खून से लथपथ मिली। उसके चेहरे को ईंट-पत्थर से बुरी तरह कुचल दिया गया था। मजमा मदद के बजाए उसका वीडियो बनाने लगा। बच्ची मदद मांगती रही। तमाशबीन डटे रहे। #kannauj@kannaujpolice @Uppolice pic.twitter.com/l7FD0YUgZf
— Tariq Iqbal (@tariq_iqbal) October 23, 2022
13 ವರ್ಷದ ಬಾಲಕಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದಳು. ಹಲವು ಗಂಟೆಗಳ ಬಳಿಕ ತಲೆ ಹಾಗೂ ಮೈ ಮೇಲಿನ ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ. ಅಲ್ಲದೇ ಆಕೆಯ ತೋಳುಗಳಲ್ಲಿ ರಕ್ತಸ್ರಾವವಾಗುತ್ತಿದ್ದು, ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿರುತ್ತಾಳೆ. ಆದರೆ ಈ ವೇಳೆ ಅನೇಕ ವ್ಯಕ್ತಿಗಳು ಸಹಾಯ ಮಾಡದೇ ಆಕೆಯ ಸುತ್ತಾ ಮೊಬೈಲ್ ಹಿಡಿದುಕೊಂಡು ವೀಡಿಯೋ ಮಾಡಿದ್ದಾರೆ. ಆದರೆ ಬಾಲಕಿಗೆ ಸಹಾಯ ಮಾಡಲು ಯಾರು ಕೂಡ ಮುಂದಾಗದಿರುವುದು ಶೋಚನೀಯ ಸಂಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post