ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ CM Yogi Adithyanath ಅವಧಿಯಲ್ಲಿ ಎನ್’ಕೌಂಟರ್ ಹಾಗೂ ಬುಲ್ಡೋಜರ್ ಭಯಕ್ಕೆ ಅಕ್ಷರಶಃ ತಲ್ಲಣಿಸಿಹೋಗಿರುವ ಕ್ರಿಮಿನಲ್’ಗಳು ಸಾಲುಸಾಲಾಗಿ ಬಂದು ಪೊಲೀಸರಿಗೆ ಶರಣಾಗುತ್ತಿದ್ದಾರೆ.
ಹೌದು… ಕಳೆದ ವಾರ ಅತ್ಯಾಚಾರ ಆರೋಪಿಯ ಮನೆಯ ಮುಂದೆ ಬುಲ್ಡೋಜರ್ ನಿಲ್ಲಿಸಿ ಎಚ್ಚರಿಕೆ ನೀಡಿದ ನಂತರ ಆತ ಪೊಲೀಸರಿಗೆ ಶರಣಾಗಿದ್ದ. ಇದೇ ಬೆಳವಣಿಗೆ ರಾಜ್ಯದಲ್ಲಿ ಮುಂದುವರೆದಿದ್ದು ಕಳೆದ ಒಂದು ವಾರದಲ್ಲಿ 50ಕ್ಕೂ ಅಧಿಕ ಮೋಸ್ಟ್ ವಾಂಟೆಡ್ ಕ್ರಿಮಿನಲ್’ಗಳು ಪೊಲೀಸರಿಗೆ ಶರಣಾಗಿದ್ದಾರೆ.

ಯೋಗಿ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ಸಮಾಜಘಾತುಕರ ವಿರುದ್ಧ ಸಮರ ಸಾರಿದ್ದರು. ಕಾನೂನು ವಿರುದ್ಧ ದುಷ್ಕೃತ್ಯ ನಡೆಸುತ್ತಿದ್ದವ ವಿರುದ್ಧ ಎನ್’ಕೌಂಟರ್ ಹಾಗೂ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಲಾಗಿತ್ತು. ಇದು ಕ್ರಿಮಿನಲ್’ಗಳು ಕನಸಿನಲ್ಲೂ ಬಟ್ಟೆ ಒದ್ದೆ ಮಾಡುಕೊಳ್ಳುವಂತೆ ಮಾಡಿತ್ತು. ಈ ಬಾರಿಯ ಚುನಾವಣೆಯಲ್ಲಿ ತಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದ ಬುಲ್ಡೋಜರ್ ಬಾಬಾ ಎಂಬುದನ್ನೇ ಅಸ್ತ್ರ ಮಾಡಿಕೊಂಡಿರುವ ಯೋಗಿ ಸರ್ಕಾರ ಈಗ ಅದೇ ಬುಲ್ಡೋಜರನ್ನೇ ಈಗ ಪ್ರಯೋಗ ಮಾಡುತ್ತಿದೆ.
ನಾನು ಶರಣಾಗುತ್ತಿದ್ದೇನೆ, ದಯವಿಟ್ಟು ನನ್ನನ್ನು ಶೂಟ್ ಮಾಡಬೇಡಿ ಎಂಬ ಸಂದೇಶವಿರುವ ಪ್ಲಕಾರ್ಡ್‌ಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ಅಪರಾಧಿಗಳು ಪೊಲೀಸ್ ಠಾಣೆಗಳಿಗೆ ತೆರಳಿ ಶರಣಾಗುತ್ತಿದ್ದಾರೆ. ಕಳೆದ ಒಂದೇ ವಾರದಲ್ಲಿ ಸುಮಾರು ೫೦ಕ್ಕೂ ಅಧಿಕ ಕ್ರಿಮಿನಲ್’ಗಳು ಶರಣಾಗಿದ್ದು, ಅಪರಾಧದಿಂದ ದೂರವಿರುತ್ತೇವೆ ಎಂದು ಪ್ರಮಾಣ ಸಹ ಮಾಡುತ್ತಿದ್ದಾರೆ.
ಇನ್ನು, ಯೋಗಿ ಎರಡನೆಯ ಬಾರಿ ಸಿಎಂ ಆದ ನಂತರ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್’ಗಳನ್ನು ಎನ್’ಕೌಂಟರ್ ಮಾಡಲಾಗಿದ್ದು, ಯಾವುದೇ ಸಮಾಜಘಾತುಕರ, ಮಾಫಿಯಾದವರ ವಿರುದ್ಧ ಮೃದುತ್ವ ಧೋರಣೆ ತೋರಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಈ ನಡುವೇ, ಅತಿಕ್ರಮಣಗಳನ್ನು ತೆರವುಗೊಳಿಸಲು ಮತ್ತು ಅಕ್ರಮ ಆಸ್ತಿಗಳನ್ನು ನೆಲಸಮಗೊಳಿಸಲು ರಾಜ್ಯದ ಹಲವೆಡೆ ಬುಲ್ಡೋಜರ್’ಗಳನ್ನು ನಿಯೋಜಿಸಲಾಗುತ್ತಿದೆ.
Also read: ಶಿವಮೊಗ್ಗದಲ್ಲಿ ಪ್ರತಿಷ್ಠಿತ ಆಕಾಶ್-ಭೈಜೂಸ್ ತರಬೇತಿ ಕೇಂದ್ರ ಆರಂಭ
ಹಲವು ಅಪಹರಣ ಮತ್ತು ಸುಲಿಗೆ ಪ್ರಕರಣಗಳ ಆರೋಪಿಯಾಗಿರುವ ಕಠಿಣ ಕ್ರಿಮಿನಲ್ ಗೌತಮ್ ಸಿಂಗ್ ಮಾರ್ಚ್ ೧೫ ರಂದು ಗೊಂಡಾ ಜಿಲ್ಲೆಯ ಛಾಪ್ಲಾ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ. ಆ ನಂತರ ಕ್ರಿಮಿನಲ್’ಗಳಲ್ಲಿ ಬುಲ್ಡೋಜರ್’ಗಳ ಭಯವನ್ನು ಪ್ರಚೋದಿಸಲಾಗಿದೆ. ಸುದ್ದಿ ಬೆಳಕಿಗೆ ಬಂದ ನಂತರ, ಸುಮಾರು ಎರಡು ಡಜನ್ ಅಪರಾಧಿಗಳು ಎಂದಿಗೂ ಅಪರಾಧಗಳನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿ ಸಹರಾನ್ಪುರ ಜಿಲ್ಲೆಯ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ದಿಯೋಬಂದ್’ನಲ್ಲಿ ನಾಲ್ವರು ಮದ್ಯ ಕಳ್ಳಸಾಗಣೆದಾರರು ಮತ್ತು ಶಾಮ್ಲಿಯಲ್ಲಿ ಕೆಲವು ಕ್ರಿಮಿನಲ್’ಗಳು ಶರಣಾದ ಬಗ್ಗೆ ಇತ್ತೀಚೆಗೆ ವರದಿಯಾಗಿದೆ. ಮಾರ್ಚ್ 6 ರಂದು, ಲಕ್ನೋದಲ್ಲಿ ಮಾಂಸಾಹಾರಿ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ನಿಕಟ ಸಹಚರರು ನಿರ್ಮಿಸಿದ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.
ಇನ್ನು, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿಗಳನ್ನು ಕೂಡ ಸರ್ಕಾರ ನೆಲಸಮಗೊಳಿಸಿದೆ. ಹೋಳಿ ಹಬ್ಬದ ಮುನ್ನಾದಿನದಂದು, ಆಡಳಿತವು ಮೈನ್ಪುರಿ ಜಿಲ್ಲೆಯಲ್ಲಿ ಅತಿಕ್ರಮಿತ ಭೂಮಿಯಲ್ಲಿ ಅಂಗಡಿಗಳನ್ನು ನೆಲಸಮಗೊಳಿಸಿತ್ತು. ಔರೈಯಾದಲ್ಲಿ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ.


ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳೆದ ವರ್ಷ ರಾಜ್ಯ ವಿಧಾನಸಭೆಯಲ್ಲಿ ಮಾಫಿಯಾಗಳಿಂದ ಮುಕ್ತವಾದ ಭೂಮಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದನ್ನು ಇಲ್ಲಿ ಪ್ರಸ್ತಾಪಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















