ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಭವಿಷ್ಯದಲ್ಲಿ ಹಿಂದೂ ದೇವಾಲಯಗಳ ವಿಚಾರದಲ್ಲಿ ಧರ್ಮ ದಂಗಲ್ ತಡೆಗೆ ಮಾಸ್ಟರ್ ಪ್ಲಾನ್ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, UP CM Yogi Adithyanath ದೇವಾಲಯಗಳ ಬಳಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಮಾಡದಂತೆ ಆದೇಶಿಸಿದ್ದಾರೆ.
ಈ ಕುರಿತಂತೆ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಧಾರ್ಮಿಕ ನಗರಗಳ ಪ್ರತಿಷ್ಠಿತ ದೇವಾಲಯಗಳ ಸುತ್ತಮುತ್ತಲು ಯಾವುದೇ ರೀತಿಯ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಗೋರಖ್ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದಂತಹ ಧಾರ್ಮಿಕ ನಗರಗಳ ಪುರಾತನ ಮತ್ತು ಐತಿಹಾಸಿಕ ಸಾರವನ್ನು ಕಾಪಾಡುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೇವಾಲಯಗಳ ಎತ್ತರವನ್ನು ಮೀರಿದ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಡಳಿತ ವಲಯಕ್ಕೆ ಸೂಚಿಸಿದ್ದಾರೆ.
Also read: ಮೈಸೂರು ಠಾಣೆಯಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್’ಐಆರ್ | ಕಾರಣವೇನು?
ಗೋರಖ್ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದ ಯೋಜಿತ ಅಭಿವೃದ್ಧಿಗಾಗಿ ಸಂಬಂಧಿಸಿ ಅಧಿಕಾರಿಗಳು ಸಿದ್ಧಪಡಿಸಿದ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್-2031 ಅನ್ನು ಸಿಎಂ ಪರಿಶೀಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post