ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಉತ್ತರ ಪ್ರದೇಶದ ಭೂಗತ ಪಾತಕಿ ಹಾಜಿ ಇಕ್ಬಾಲ್’ಗೆ ಮಾಸ್ಟರ್ ಸ್ಟ್ರೋಕ್ ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬರೋಬ್ಬರಿ 500 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಸಿಎಂ ಯೋಗಿ ಸೂಚನೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಮಾಫಿಯಾ ಗ್ಯಾಂಗ್’ಸ್ಟರ್ ವರ್ಷದ ಹಾಜಿ ಇಕ್ಬಾಲ್(60) ವಿರುದ್ಧ ಈ ಕ್ರಮ ಕೈಗೊಂಡಿದ್ದಾರೆ.
ಈತನ 500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹರಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್’ಗೆ ಪ್ರಸ್ತಾವನೆ ಸೂಚಿಸಲಾಗಿದೆ.
Also read: ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು: ಸಿಎಂ ದೆಹಲಿ ಪ್ರವಾಸದಲ್ಲಿ ಬದಲಾವಣೆ
ಎಲ್ಲೆಲ್ಲಿ ಎಷ್ಟು ಅಕ್ರಮ ಆಸ್ತಿ ಮುಟ್ಟುಗೋಲು?
ಸಹರಾನ್ಪುರದಲ್ಲಿ 200 ಕೋಟಿ ರೂ.ಗಳ ಆಸ್ತಿ, ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ಸುಮಾರು 300 ಕೋಟಿ ರೂ.ಗಳ ಉದ್ದೇಶಿತ ಟೌನ್ ಶಿಪ್ ಭೂಮಿ ಮತ್ತು ಲಕ್ನೋದಲ್ಲಿ 7 ಕೋಟಿ ರೂ.ಗಳ ಬಂಗಲೆ ಸೇರಿದೆ ಎಂದು ವರದಿಯಾಗಿದೆ.
ಏನೆಲ್ಲಾ ಅತಿಕ್ರಮಣವಾಗಿತ್ತು?
ಅಕ್ರಮ ಗಣಿಗಾರಿಕೆ, ಭೂ ಅತಿಕ್ರಮಣ, ಮಹಿಳೆಯರ ಮೇಲಿನ ದೌರ್ಜನ್ಯ, ವಂಚನೆ, ಸರ್ಕಾರಿ ಆಸ್ತಿ ಅತಿಕ್ರಮಣ ಸೇರಿದಂತೆ 36 ಕ್ರಿಮಿನಲ್ ಪ್ರಕರಣಗಳಲ್ಲಿ ಇಕ್ಬಾಲ್ ಆರೋಪಿಯಾಗಿದ್ದಾನೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post